alex Certify ತಾಯಿಗೆ ಪದವಿ ಅರ್ಪಿಸಿದ ಪುತ್ರ; ನೆಟ್ಟಿಗರಿಂದ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಗೆ ಪದವಿ ಅರ್ಪಿಸಿದ ಪುತ್ರ; ನೆಟ್ಟಿಗರಿಂದ ಶ್ಲಾಘನೆ

Viral Video: Son Dedicates Degree to Mom, Puts Graduation Cap and Gown On Her As She Cries. Watchಯುವಕನೊಬ್ಬ ತನ್ನ ಪದವಿಯನ್ನು ತಾಯಿಗೆ ಅರ್ಪಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಇನ್ಸ್ಟಾಗ್ರಾಂನ ಗುಡ್ ನ್ಯೂಸ್ ಮೂವ್ಮೆಂಟ್ ಪುಟ ಹಂಚಿಕೊಂಡಿದೆ. ಈ ಹೃದಯಸ್ಪರ್ಶಿ ವಿಡಿಯೋ 3.2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಮೆಕ್ಸಿಕನ್ ಕಾಲೇಜೊಂದರ ಪದವಿ ಸಮಾರಂಭದಲ್ಲಿ  ಆಂಟೋನಿಯೊ ಚಾವೆಕ್ಸ್ ಎಂಬ ಯುವಕ ತನ್ನ ಪದವಿಯನ್ನು ಸ್ವೀಕರಿಸಿದ್ದಾನೆ. ನಂತರ ನೇರ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ತನ್ನ ತಾಯಿಯ ಬಳಿಗೆ ಬಂದ ಆತ ಕ್ಯಾಪ್ ತೆಗೆದು ತಾಯಿಯ ತಲೆಯ ಮೇಲಿಟ್ಟಿದ್ದಾನೆ. ನಂತರ ಆತ ತನ್ನ ಕುತ್ತಿಗೆಯ ಮೇಲಿದ್ದ ಕವಚ, ಕಪ್ಪು ಬಣ್ಣದ ಗೌನ್ ಅನ್ನು ಸಹ ತಾಯಿಗೆ ತೊಡಿಸಿ, ತನ್ನ ಪದವಿಯನ್ನು ಆಕೆಗೆ ಸಮರ್ಪಿಸಿದ್ದಾನೆ.

ಈ ವೇಳೆ ತಾಯಿಗೆ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ತಾಯಿ-ಮಗ ಇಬ್ಬರೂ ಕೂಡ ಪರಸ್ಪರ ತಬ್ಬಿಕೊಂಡಿದ್ದಾರೆ. ತನ್ನ ತಾಯಿಗೆ ಪುತ್ರ ಆಂಟೋನಿಯೊ ಸಿಹಿ ಮುತ್ತುಗಳನ್ನು ನೀಡಿದ್ದಾನೆ. ಮಗನ ಈ ಕಾರ್ಯದಿಂದ ತಾಯಿ ಖುಷಿಯಿಂದ ಕಣ್ಣೀರಧಾರೆ ಹರಿಸಿದ್ದಾಳೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತಾಯಿ-ಮಗನ ಈ ಅದ್ಭುತ ಬಾಂಧವ್ಯವನ್ನು ಕೊಂಡಾಡಿದ್ದಾರೆ. ಪುತ್ರ ತನ್ನ ತಾಯಿಗೆ ಪದವಿಯನ್ನು ಸಮರ್ಪಿಸಿದ್ದಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...