alex Certify ತನ್ನ ವೃತ್ತಿಯನ್ನು ಹೆತ್ತವರಿಗೆ ತಿಳಿಸಲು ವಿಶಿಷ್ಟ ವಿಧಾನ ಅನುಸರಿಸಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ವೃತ್ತಿಯನ್ನು ಹೆತ್ತವರಿಗೆ ತಿಳಿಸಲು ವಿಶಿಷ್ಟ ವಿಧಾನ ಅನುಸರಿಸಿದ ಯುವತಿ

ಕೆಲವೊಂದು ವಿಷಯಗಳನ್ನು ವಿವರಿಸಬೇಕಾದರೆ ಪವರ್ ಪಾಯಿಂಟ್ ಮೂಲಕ ಪ್ರಸ್ತುತಪಡಿಸುವುದು ಹೆಚ್ಚು ಉಪಯುಕ್ತಕರವಾಗಿದೆ. ಇತ್ತೀಚೆಗೆ ಪೋರ್ಟ್ ಲ್ಯಾಂಡ್ ನ ಯುವತಿಯೊಬ್ಬಳು ತನ್ನ ಪೋಷಕರಿಗೆ ತಾನು ಏನು ಕೆಲಸ ಮಾಡುತ್ತಿದ್ದೇನೆ ಎಂದು ಬಹಿರಂಗಪಡಿಸಲು ಪವರ್ ಪಾಯಿಂಟ್ ಮೊರೆ ಹೋಗಿದ್ದಾಳೆ.

ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋವನ್ನು 2 ಮಿಲಿಯನ್ ಜನರು ವೀಕ್ಷಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೋದಲ್ಲಿ, ಯುವತಿ ತನ್ನ ಹೆತ್ತವರಿಗೆ ಒಂದು ದೊಡ್ಡ ರಹಸ್ಯವನ್ನು ಬಹಿರಂಗಪಡಿಸುವುದಾಗಿ ವಿವರಿಸುವುದನ್ನು ಕಾಣಬಹುದು. ಅಲ್ಲದೆ ಪವರ್ ಪಾಯಿಂಟ್ ಪ್ರಸ್ತುತಪಡಿಸುವ ಮೊದಲು ತನಗೆ ಯಾವುದೇ ಅಪಾಯವಿಲ್ಲ ಎಂದು ಭರವಸೆ ನೀಡಿದ್ದಾಳೆ.

ಈ ವೇಳೆ ಆಕೆ ತಾನು ಸ್ಟ್ರಿಪ್ಪರ್ ಕೆಲಸ ಮಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ. ಸ್ಟ್ರಿಪ್ ಕ್ಲಬ್ ನಲ್ಲಿ ಪೋಲ್ ಡ್ಯಾನ್ಸ್ ಮಾಡುತ್ತಿರುವುದಾಗಿ ಆಕೆ ಹೇಳಿದ್ದು, ತಾನು ಅದನ್ನು ಪ್ರೀತಿಸುವುದಾಗಿ ವಿವರಿಸಿದ್ದಾಳೆ. ಹಾಗೂ ಆಕೆ ಈ ಕೆಲಸವನ್ನು ಏಕೆ ಆಯ್ಕೆ ಮಾಡಿಕೊಂಡಳು ? ಇದರಲ್ಲಿ ಆಕೆ ಹೇಗೆ ಸುರಕ್ಷಿತವಾಗಿದ್ದಾಳೆ ? ಹಾಗೂ ತೆರಿಗೆಯನ್ನು ಪಾವತಿಸುತ್ತಿರುವುದರ ಬಗ್ಗೆ ವಿವರಿಸಿದ್ದಾಳೆ.

ಇನ್ನು ಪವರ್ ಪಾಯಿಂಟ್ ಸ್ಲೈಡ್ ಮುಗಿಯುವ ವೇಳೆ, ಪೋಷಕರು ಕೂಡ ತಮ್ಮ ಮಗಳಿಗೆ ಚಪ್ಪಾಳೆ ತಟ್ಟಿ ಸಂತಸಪಟ್ಟಿದ್ದಾರೆ. ಅಲ್ಲದೆ ತನ್ನ ಜೀವನವನ್ನು ಹಂಚಿಕೊಂಡಿದ್ದಕ್ಕಾಗಿ ಆಕೆಯನ್ನು ಶ್ಲಾಘಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...