alex Certify ಡೇಟಿಂಗ್​ ಗಾಗಿ ಯುವತಿ ಜತೆ ಹೋಗುವಾಗ ಅಮ್ಮನನ್ನೂ ಕರೆದೊಯ್ದ ಯುವಕ….! ವೈರಲ್​ ವಿಡಿಯೋಗೆ ನೆಟ್ಟಿಗರು ಖುಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್​ ಗಾಗಿ ಯುವತಿ ಜತೆ ಹೋಗುವಾಗ ಅಮ್ಮನನ್ನೂ ಕರೆದೊಯ್ದ ಯುವಕ….! ವೈರಲ್​ ವಿಡಿಯೋಗೆ ನೆಟ್ಟಿಗರು ಖುಷಿ

ಯಾವುದಾದರೂ ಹುಡುಗಿಯ ಜತೆ ಡೇಟಿಂಗ್​ ಮಾಡುವ ಸಮಯದಲ್ಲಿ ಮನೆಯವರಿಗೆ ತಿಳಿಯದಂತೆ ಕದ್ದುಮುಚ್ಚಿ ಯುವಕರು ಹೋಗುವುದು ಮಾಮೂಲು. ಇದೇ ಕಾರಣಕ್ಕೆ ಯಾರಾದರೂ ನೋಡಿಬಿಟ್ಟರೆ ಎನ್ನುವ ಭಯವಿರುತ್ತದೆ.

ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಯುವಕನೊಬ್ಬ ಆನ್​ಲೈನ್​ನಲ್ಲಿ ಪರಿಚಯವಾಗಿರುವ ಸ್ನೇಹಿತೆಯ ಜತೆ ಡೇಟಿಂಗ್​ ಮಾಡಲು ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ !

ಈ ಡೇಟಿಂಗ್​ನ ಸಂಪೂರ್ಣ ವಿಡಿಯೋ ಚಿತ್ರೀಕರಿಸಿರುವ ಯುವಕ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅದನ್ನು ಶೇರ್​ ಮಾಡಿಕೊಂಡಿದ್ದಾನೆ.

ಸಿದ್ದೇಶ್ ಲೋಖರೆ ಎಂಬ ಯುವಕ ಆನ್​ಲೈನ್​ನಲ್ಲಿ ಪರಿಚಯವಾಗಿರುವ ಯುವತಿಯ ಜತೆ ಡೇಟಿಂಗ್​ ಮಾಡಲು ಬಯಸಿದ್ದ. ಆ ನಂತರ ಇದನ್ನು ತನ್ನ ತಾಯಿಗೆ ಗೊತ್ತಾದರೆ ಬೇಸರವಾಗಬಹುದು ಎನ್ನುವ ಉದ್ದೇಶದಿಂದ ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ. ತಾಯಿಗೆ ತಾವು ಹೋಗುತ್ತಿರುವುದು ಎಲ್ಲಿಗೆ, ಏಕೆ ಎಂದು ತಿಳಿದಿರಲಿಲ್ಲ. ನಂತರ ಆ ಹುಡುಗಿಯನ್ನು ಭೇಟಿ ಮಾಡಿಸಿದ್ದಾನೆ ಯುವಕ.

ತಾಯಿಯನ್ನು ಭೇಟಿಯಾದಾಗ ಯುವತಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾಳೆ. ನಂತರ ಇಬ್ಬರೂ ಸ್ನೇಹಿತರಾಗಿದ್ದಾರೆ. ಹೋಟೆಲ್​ಗೂ ಹೋಗಿದ್ದಾರೆ. ಇಬ್ಬರೂ ತುಂಬಾ ಕ್ಲೋಸ್​ ಆದ ಮೇಲೆ ಯುವಕ ಆ ಯುವತಿಯನ್ನು ತಾಯಿಗೆ ಪರಿಚಯ ಮಾಡಿಸಿದ್ದಾನೆ. ತಾಯಿಯೂ ಈಗ ಖುಷಿಯಾಗಿದ್ದು, ಮಗನಿಗೆ ಬೆಂಬಲಿಸಿದ್ದಾಳೆ! ಈ ವಿಡಿಯೋ ಅನ್ನು ಸಹಸ್ರಾರು ಮಂದಿ ಮೆಚ್ಚಿ ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...