alex Certify ಟ್ರಾಫಿಕ್​ ಸಿಗ್ನಲ್ ಬ್ಯಾಟರಿಗಳನ್ನು ಕದಿಯುತ್ತಿದ್ದ ದಂಪತಿ ಅಂದರ್​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್​ ಸಿಗ್ನಲ್ ಬ್ಯಾಟರಿಗಳನ್ನು ಕದಿಯುತ್ತಿದ್ದ ದಂಪತಿ ಅಂದರ್​​​

ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದಿಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಶೋಕ್​ ನಗರ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪೊಲೀಸರು ಇತ್ತೀಚಿಗೆ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ದಂಪತಿ ಸ್ಕೂಟರ್​ನಲ್ಲಿ ಮುಂಜಾನೆ 3 ರಿಂದ 5 ಗಂಟೆಯ ನಡುವೆ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ.

ಸಿಸಿ ಕ್ಯಾಮರಾದಲ್ಲಿ ತಮ್ಮ ಸ್ಕೂಟರ್​ನ ಸಂಖ್ಯೆಯು ಸೆರೆಹಿಡಿಯಬಾರದೆಂದು ದಂಪತಿ ಟೈಲ್​ ಲೈಟ್​ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಬಳಿಕ ಟ್ರಾಫಿಕ್​ ಲೈಟ್​ ಬ್ಯಾಟರಿಗಳನ್ನು ಕದ್ದಿದ್ದಾರೆ.

ಈ ದಂಪತಿಯು ಕಳೆದ ವರ್ಷ ಜೂನ್​ ತಿಂಗಳಿನಿಂದ ಟ್ರಾಫಿಕ್​ ಸಿಗ್ನಲ್​ಗಳ ಬ್ಯಾಟರಿಗಳನ್ನು ಕದಿಯಲು ಯತ್ನಿಸಿದರು. ದಂಪತಿ ಈ ಬ್ಯಾಟರಿಗಳನ್ನು ಗುಜರಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿ ಸಿಕಂದರ್​ ಟೀ ಮಾರುವವನು ಹಾಗೂ ನಜ್ಮಾ ಗಾರ್ಮೆಂಟ್ಸ್​ ಕೆಲಸಗಾರರಾಗಿದ್ದಾರೆ. ಸಿಕಂದರ್​ ಈ ಹಿಂದೆ 2017 ಹಾಗೂ 2018ರಲ್ಲಿ ಉಪ್ಪಾರಪೇಟೆ ಹಾಗೂ ಜೆ.ಜೆ ನಗರ ಪೊಲೀಸ್​ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದಕ್ಕಾಗಿ ಬಂಧಿಸಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...