alex Certify ಟ್ರಾಫಿಕ್​​​ ನಿಯಮ ಪಾಲಿಸಿದವರ ಅದ್ಭುತ ಫೋಟೋ ಹಂಚಿಕೊಂಡ ಆನಂದ್​ ಮಹೀಂದ್ರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್​​​ ನಿಯಮ ಪಾಲಿಸಿದವರ ಅದ್ಭುತ ಫೋಟೋ ಹಂಚಿಕೊಂಡ ಆನಂದ್​ ಮಹೀಂದ್ರಾ..!

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಮಿಜೋರಾಂಗೆ ಸಂಬಂಧಿಸಿದ ಫೋಟೋವೊಂದು ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಶೇರ್​ ಮಾಡಿದ್ದಾರೆ.

ಈ ಫೋಟೊವನ್ನು ಮೊದಲು ಟ್ವಿಟರ್​ನಲ್ಲಿ ಸಂದೀಪ್​ ಅಹ್ಲಾವತ್​ ಎಂಬವರು ಶೇರ್​ ಮಾಡಿದ್ದರು. ಈ ಫೋಟೋ ಆನಂದ್​ ಮಹೀಂದ್ರಾರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಫೋಟೋದಲ್ಲಿ ಮಿಜೋರಾಂನ ವಾಹನ ಸವಾರರು ಎಷ್ಟು ಘನತೆಯಿಂದ ಟ್ರಾಫಿಕ್​ ರೂಲ್ಸ್​ ಫಾಲೋ ಮಾಡ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ.

ಮಹೀಂದ್ರಾ ಗ್ರೂಪ್​ ಚೇರ್​ಮನ್​​ ಟ್ವಿಟರ್​ನಲ್ಲಿ ಹಂಚಿಕೊಂಡ ಫೊಟೋದಲ್ಲಿ ವಾಹನ ಸವಾರರು ಒಂದೇ ಒಂದು ವಾಹನವನ್ನೂ ಓವರ್​ಟೇಕ್​ ಮಾಡಲು ಯತ್ನಿಸದೆ ವಾಹನಗಳಿಗೆ ನಿಗದಿಯಾದ ಸ್ಥಳದಲ್ಲಿಯೇ ನಿಂತಿದ್ದಾರೆ.

ಈ ಫೋಟೋವನ್ನು ಶೇರ್​ ಮಾಡಿರುವ ಆನಂದ್​ ಮಹೀಂದ್ರಾ ಇದು ಎಂತಹ ಅದ್ಭುತ ಚಿತ್ರ..! ಒಂದೇ ಒಂದು ವಾಹನ ಕೂಡ ರೋಡ್​ ಮಾರ್ಕರ್​ನಿಂದ ಹೊರಬಂದಿಲ್ಲ. ಇದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಅಲ್ಲದೇ ಈ ಫೋಟೋ ಮಹತ್ವದ ಸಂದೇಶವನ್ನು ಸಾರುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ.

— anand mahindra (@anandmahindra) March 1, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...