alex Certify ಟ್ಯಾಬ್ಲೆಟ್ ‌ನಲ್ಲಿ ಗೇಮ್ ಆಡಿದ ಬೆಕ್ಕಿನ ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯಾಬ್ಲೆಟ್ ‌ನಲ್ಲಿ ಗೇಮ್ ಆಡಿದ ಬೆಕ್ಕಿನ ಮುದ್ದಾದ ವಿಡಿಯೋ ವೈರಲ್

Viral Video: Cat Plays Fruit Ninja on Tablet, Then This Funny Thing Happens. Watchಮಕ್ಕಳು ಮಾತ್ರವಲ್ಲ ಪ್ರಾಣಿಗಳೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಇಷ್ಟಪಡುತ್ತವೆ. ಇದೀಗ ಮುದ್ದಾದ ಪುಟ್ಟ ಬೆಕ್ಕೊಂದು ಟ್ಯಾಬ್ಲೆಟ್‌ನಲ್ಲಿ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಬೆಕ್ಕು ಟ್ಯಾಬ್ಲೆಟ್‌ನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಬೆಕ್ಕೊಂದು ಮಂಚದ ಮೇಲೆ ನಿಂತಿದ್ದು, ಅದರ ಪಕ್ಕದಲ್ಲಿ ಮಹಿಳೆಯೊಬ್ಬಳು ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮಂಚದ ಮೇಲಿಟ್ಟಿರುವ ಟ್ಯಾಬ್ಲೆಟ್ ಅನ್ನು ನೋಡಿದ ಬೆಕ್ಕೊಂದು ಅದರ ಮೇಲೆ ಹಾರುತ್ತದೆ. ಗೇಮ್ ನಲ್ಲಿ ಹಣ್ಣುಗಳು ಕಾಣಿಸಿಕೊಳ್ಳುತ್ತಿದ್ದಂತೆ ಅದರ ಉಗುರುಗಳಿಂದ ಸ್ಕ್ರಾಚ್ ಮಾಡುತ್ತದೆ. ಆಟದಲ್ಲಿ ಮನುಷ್ಯರು ತಮ್ಮ ಬೆರಳುಗಳಿಂದ ಹಣ್ಣುಗಳನ್ನು ಕತ್ತರಿಸುವಂತೆ, ಬೆಕ್ಕು ಅದರ ಮೇಲೆ ಹಾರುತ್ತದೆ.

ಹಣ್ಣುಗಳು ವೇಗವಾಗಿ ಬೀಳಲು ಪ್ರಾರಂಭಿಸಿದಾಗ, ಬೆಕ್ಕು ವೇಗವಾಗಿ ಪರದೆಯ ಮೇಲೆ ಜಿಗಿಯಲು ಮತ್ತು ಕಡಿದು ಹಾಕಲು ಪ್ರಾರಂಭಿಸುತ್ತದೆ. ಹಾಗೆ ಮಾಡುವಾಗ ಬೆಕ್ಕು ಸೋಫಾದಿಂದ ಕೆಳಕ್ಕೆ ಬಿದ್ದು ಬಿಟ್ಟಿದೆ. ವಿಡಿಯೋ ನೋಡಿ ಇಷ್ಟಪಟ್ಟ ನೆಟ್ಟಿಗರು ಇದನ್ನು ಉಲ್ಲಾಸದಾಯಕವೆಂದು ಪ್ರತಿಕ್ರಿಯಿಸಿದ್ದಾರೆ. ನಗುವ ಎಮೋಜಿಗಳೊಂದಿಗೆ ಕಾಮೆಂಟ್‌ ವಿಭಾಗವನ್ನು ತುಂಬಿದ್ದಾರೆ.

— 𝕐o̴g̴ (@Yoda4ever) April 19, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...