alex Certify ಟಾಟಾ ನೆಕ್ಸಾನ್‌ಗೆ ಪೈಪೋಟಿ ಒಡ್ಡಲು ಬರ್ತಿದೆ ಮಾರುತಿಯ ಹೊಸ SUV: ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ನೆಕ್ಸಾನ್‌ಗೆ ಪೈಪೋಟಿ ಒಡ್ಡಲು ಬರ್ತಿದೆ ಮಾರುತಿಯ ಹೊಸ SUV: ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ….!

ಮಾರುತಿ ಸುಜುಕಿ 2023ನೇ ವರ್ಷವನ್ನು ಭರ್ಜರಿಯಾಗಿಯೇ ಆರಂಭಿಸ್ತಾ ಇದೆ. ತನ್ನ ಪೋರ್ಟ್‌ಫೋಲಿಯೊಗೆ ಹೊಸ ಮಾದರಿಯನ್ನು ಸೇರಿಸುವ ಮೂಲಕ ವಾಹನ ಪ್ರಿಯರಲ್ಲಿ ಉತ್ಸಾವವನ್ನು ಹುಟ್ಟುಹಾಕಿದೆ. ಜನವರಿ ತಿಂಗಳಿನಲ್ಲಿಯೇ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೂರು ಹೊಸ ಎಸ್‌ಯುವಿಗಳನ್ನು ಪ್ರದರ್ಶಿಸುವುದಾಗಿ ಮಾರುತಿ ಸುಜುಕಿ ಖಚಿತಪಡಿಸಿದೆ.

ಹೊಸ ಮಾರುತಿ ಕೂಪೆ ಎಸ್‌ಯುವಿ (ಕೋಡ್‌ನೇಮ್- ವೈಟಿಬಿ) ಸಹ ಇವುಗಳಲ್ಲೊಂದು. ಇದರ ಅಧಿಕೃತ ಹೆಸರು ಮತ್ತು ವಿವರಗಳ ಬಗ್ಗೆ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಇದಕ್ಕೆ ಮಾರುತಿ ಬಲೆನೊ ಕ್ರಾಸ್ ಎಂದು ಹೆಸರಿಡಬಹುದು ಎಂದು ಹೇಳಲಾಗುತ್ತಿದೆ.

ಈ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿ, ಬೂಸ್ಟರ್‌ ಜೆಟ್‌ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿರುವ ಸಾಧ್ಯತೆ ಇದೆ. ಈ ಹಿಂದೆ BS6 ಸಿದ್ಧವಾಗಿರದ ಕಾರಣ ಅದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಅದು BS6 ಅವತಾರದಲ್ಲಿ ಬರಲಿದೆ. ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನೂ ಇದರಲ್ಲಿ ನೀಡಬಹುದು. ಇದು 1.2L ಡ್ಯುಯಲ್‌ಜೆಟ್ ಅಥವಾ 1.5L ಡ್ಯುಯಲ್‌ಜೆಟ್ ಹೊಂದಿರುವ ಸಾಧ್ಯತೆಯಿದೆ. ಪೆಟ್ರೋಲ್ ಎಂಜಿನ್‌ನ ಆಯ್ಕೆಯನ್ನು ಸಹ ನೀಡಬಹುದು. ಕಾರಿನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ನೀಡಲಾಗುವುದು.

ವಿನ್ಯಾಸ ಮತ್ತು ವೈಶಿಷ್ಟ್ಯಗಳು

ಬ್ರಾಂಡ್‌ನ ಹೊಸ ಎಸ್‌ಯುವಿ ವಿನ್ಯಾಸ ಗ್ರ್ಯಾಂಡ್ ವಿಟಾರಾದಂತಿರಲಿದೆ ಅನ್ನೋದು ಎಲ್ಲರ ಲೆಕ್ಕಾಚಾರ. ಇದು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಮತ್ತು ಸ್ಲಿಮ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹೆಚ್ಚು ಆಕರ್ಷಕವೆನಿಸಲಿದೆ. ಬಾನೆಟ್‌ನ ಮೇಲ್ಭಾಗದಲ್ಲಿ ಸಿಗ್ನೇಚರ್ ‘ತ್ರೀ-ಬ್ಲಾಕ್’ ಅನ್ನು ಅಳವಡಿಸೋ ಸಾಧ್ಯತೆ ಇದೆ. ವಿನ್ಯಾಸದ ಕೆಲವು ಅಂಶಗಳು ಬಲೆನೊ ಹ್ಯಾಚ್‌ಬ್ಯಾಕ್ ಮತ್ತು ಫ್ಯೂಚುರೊ ಇ-ಕಾನ್ಸೆಪ್ಟ್‌ ಅನ್ನು ಹೋಲುತ್ತವೆ. ಮಾರುತಿ ಸುಜುಕಿಯ ಹೊಸ ಕೂಪೆ SUV ವೈರ್‌ಲೆಸ್ Apple CarPlay ಮತ್ತು Android Auto ಸಂಪರ್ಕದೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿದೆ.

ವಾಯ್ಸ್‌ ಕಮಾಂಡ್‌ ಮತ್ತು ಸುಜುಕಿ ಕನೆಕ್ಟ್ ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ. ಇದರಲ್ಲಿ ಡಿಜಿಟಲ್ ಕನ್ಸೋಲ್, ಆಟೋ ಎಸಿ ಯುನಿಟ್, ರಿಯರ್ ಎಸಿ ವೆಂಟ್‌ಗಳು ಮತ್ತು ಮಲ್ಟಿಪಲ್ ಏರ್‌ಬ್ಯಾಗ್‌ಗಳನ್ನು ಸಹ ಒದಗಿಸಲಾಗುತ್ತದೆ. ಹೊಸ ಮಾರುತಿ YTB SUVಯ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಆದರೆ ಕಾರಿನ ಉತ್ಪಾದನಾ ಆವೃತ್ತಿಯು ಏಪ್ರಿಲ್ 2023ರ ವೇಳೆಗೆ ಮಾರಾಟವಾಗಲಿದೆ ಎಂದು ವರದಿಗಳು ಹೇಳ್ತಿವೆ.

ಹೊಸ ಮಾರುತಿ ಬಲೆನೊ ಕ್ರಾಸ್ ಎಸ್‌ಯುವಿ ಮೂಲ ಮಾದರಿಗೆ ಸುಮಾರು 8 ಲಕ್ಷ ಮತ್ತು ಟಾಪ್ ಎಂಡ್ ಟ್ರಿಮ್‌ಗೆ 13 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಇದು ಟಾಟಾ ನೆಕ್ಸಾನ್, ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ ಮುಂತಾದ SUV ಗಳೊಂದಿಗೆ ಸ್ಪರ್ಧಿಸುತ್ತದೆ. ಕ್ರೆಟಾದ ಕೆಲವು ಆರಂಭಿಕ ರೂಪಾಂತರಗಳಿಗೂ ಪೈಪೋಟಿ ಒಡ್ಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...