alex Certify ಜುಲೈನಲ್ಲಿ 16 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈನಲ್ಲಿ 16 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಸಂಪೂರ್ಣ ವಿವರ

ಇನ್ನೇನು ಜೂನ್‌ ತಿಂಗಳು ಮುಗೀತಾ ಬಂತು. ಜುಲೈನಲ್ಲಿ ನಿಮಗೇನಾದ್ರೂ ನಿರ್ದಿಷ್ಟ ಬ್ಯಾಂಕ್‌ ಕೆಲಸಗಳಿದ್ರೆ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳುವುದು ಉತ್ತಮ. ಯಾಕಂದ್ರೆ ಜುಲೈನಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕುಗಳಿಗೆ ರಜಾ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 2022ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ರಜೆಯ ಮೂರು ವಿಭಾಗಗಳನ್ನು ವಿಂಗಡಿಸಿದೆ.

ಇದು ನೆಗೋಶಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದನ್ನು ಒಳಗೊಂಡಿರುತ್ತದೆ. ರಾಷ್ಟ್ರೀಯ ರಜಾದಿನಗಳ ಜೊತೆಗೆ, ಕೆಲವು ರಾಜ್ಯಗಳಲ್ಲಿ ನಿರ್ದಿಷ್ಟ ರಜಾದಿನಗಳಿವೆ. ಎಲ್ಲಾ ಭಾನುವಾರಗಳು ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಒಳಗೊಂಡಿರುತ್ತದೆ. ಜುಲೈ ತಿಂಗಳಲ್ಲಿ ಬ್ಯಾಂಕ್‌ಗಳು ಯಾವ ದಿನಗಳಲ್ಲಿ ಮುಚ್ಚಲ್ಪಡುತ್ತವೆ ಎಂಬುದನ್ನು ನೋಡೋಣ. (ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತವೆ)

ಜುಲೈ1 : ಕಾಂಗ್ ರಥ ಯಾತ್ರೆ – ಭುವನೇಶ್ವರ ಮತ್ತು ಇಂಫಾಲ್‌ನಲ್ಲಿ ಬ್ಯಾಂಕುಗಳಿಗೆ ರಜಾ

ಜುಲೈ 3: ಭಾನುವಾರ (ವಾರದ ರಜೆ).

ಜುಲೈ 5: ಮಂಗಳವಾರ – ಗುರು ಹರಗೋಬಿಂದ್ ಅವರ ಬೆಳಕಿನ ದಿನ – ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕುಗಳು ಬಂದ್‌.

ಜುಲೈ 6: – ಬುಧವಾರ – MHIP ದಿನ – ಮಿಜೋರಾಂನಲ್ಲಿ ಬ್ಯಾಂಕುಗಳಿಗೆ ರಜಾ.

ಜುಲೈ 7: ಖಾರ್ಚಿ ಪೂಜೆ – ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.

ಜುಲೈ 9: ಶನಿವಾರ (ತಿಂಗಳ ಎರಡನೇ ಶನಿವಾರ), ಈದ್-ಉಲ್-ಅಧಾ (ಬಕ್ರೀದ್)

ಜುಲೈ 10: ಭಾನುವಾರ (ವಾರದ ರಜೆ)

ಜುಲೈ 11: ಎಜ್-ಉಲ್-ಅಜಾ- ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ.

ಜುಲೈ 13: ಭಾನು ಜಯಂತಿ – ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕ್ ಬಂದ್‌.

ಜುಲೈ 14: ಬೆನ್ ಡಿಯೆಂಕ್ಲಾಮ್ – ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.

ಜುಲೈ 16: ಹರೇಲಾ-ಡೆಹ್ರಾಡೂನ್‌ನಲ್ಲಿ ಬ್ಯಾಂಕ್‌ಗಳಿಗೆ ರಜಾ.

ಜುಲೈ 17: ಭಾನುವಾರ (ವಾರದ ರಜೆ)

ಜುಲೈ 23: ಶನಿವಾರ (ತಿಂಗಳ ನಾಲ್ಕನೇ ಶನಿವಾರ)

ಜುಲೈ 24: ಭಾನುವಾರ (ವಾರದ ರಜೆ)

ಜುಲೈ 26: ಕೇರ್ ಪೂಜೆ- ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.

ಜುಲೈ 31: ಭಾನುವಾರ (ವಾರದ ರಜೆ)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...