alex Certify ಜಿಂಕೆಯ ಎತ್ತರ ಜಿಗಿತ ಕಂಡು ಶಾಕ್​ ಆದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆಯ ಎತ್ತರ ಜಿಗಿತ ಕಂಡು ಶಾಕ್​ ಆದ ನೆಟ್ಟಿಗರು…!

ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಕಾಣ ಸಿಗುವ ಪ್ರಾಣಿಗಳ ವಿಡಿಯೋಗಳನ್ನು ನೋಡುತ್ತಾ ಕುಳಿತರೆ ಸಮಯ ಸಾಗಿದ್ದೇ ತಿಳಿಯೋದಿಲ್ಲ. ಇದೇ ರೀತಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಜಿಂಕೆಯೊಂದು ಬರೋಬ್ಬರಿ 7 ಅಡಿ ಎತ್ತರದಲ್ಲಿ ಜಿಗಿದಿದ್ದು ಇದನ್ನು ನೋಡಿದ ನೆಟ್ಟಿಗರು ಬೆಕ್ಕಸ ಬೆರಗಾಗಿದ್ದಾರೆ.

ರಸ್ತೆಯನ್ನು ದಾಟಬೇಕೆಂದು ಜಿಂಕೆ ಈ ರೀತಿ ಒಂದು ತುದಿಯಿಂದ ಇನ್ನೊಂದು ತುದಿಗೆ ಹಾರಿದೆ. ಸ್ಲೋ ಮೋಷನ್​​ನಲ್ಲಿ ಶೂಟ್​ ಮಾಡಲಾದ ವಿಡಿಯೋದಲ್ಲಿ ಜಿಂಕೆಯು ಹಾರುವಾಗ ಎಷ್ಟು ಎತ್ತರ ಹಾಗೂ ದೂರವನ್ನು ಕ್ರಮಿಸಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಇದು ನೋಡೋದಕ್ಕೆ ಆಕಾಶದಲ್ಲಿ ಜಿಂಕೆ ಹಾರುತ್ತಿರುವಂತೆ ಭಾಸವಾಗುತ್ತಿದೆ. ಅಷ್ಟು ಎತ್ತರದಲ್ಲಿ ಹಾರಿದ್ದರೂ ಸಹ ಜಿಂಕೆಯು ಸುರಕ್ಷಿತವಾಗಿ ನೆಲದ ಮೇಲೆ ಕಾಲಿಟ್ಟಿದೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ಉದ್ದ ಹಾಗೂ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಸಿಗುತ್ತಿದೆ……. ಎಂದು ಶೀರ್ಷಿಕೆ ನೀಡಲಾಗಿದೆ.

— WildLense® Eco Foundation 🇮🇳 (@WildLense_India) January 15, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...