alex Certify ಸೆಲೆಬ್ರಿಟಿಗಳು ಮತ್ತು ಪಾಪರಾಜಿಗಳು ಎದುರಾದಾಗ ವೈರಲ್ ಆದ ಪ್ರಮುಖ ವಿಡಿಯೋಗಳಿವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲೆಬ್ರಿಟಿಗಳು ಮತ್ತು ಪಾಪರಾಜಿಗಳು ಎದುರಾದಾಗ ವೈರಲ್ ಆದ ಪ್ರಮುಖ ವಿಡಿಯೋಗಳಿವು

Celebrities vs Paparazzi: 7 shocking encounters that went viral

ಪಾಪರಾಜಿಗಳ ಕ್ಯಾಮೆರಾ ಕಣ್ಣು ಯಾವಾಗಲು ಸೆಲೆಬ್ರಿಟಿಗಳನ್ನು ಹುಡುಕುತ್ತಿರುತ್ತದೆ. ಕಲಾವಿದರ ವಿಡಿಯೋ ಹಿಡಿಯುವಾಗ ಪಾಪರಾಜಿ ಮತ್ತು ಸೆಲಬ್ರಿಟಿಗಳ ನಡುವಿನ ಕೆಲ ಸಂಭಾಷಣೆಗಳು ಮೋಜಿನಿಂದ ಕೂಡಿರುತ್ತವೆ. ಇಂತಹ ಕೆಲವು ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿ ನೆಟ್ಟಿಗರಲ್ಲಿ ಹಾಸ್ಯ ಮತ್ತು ಉತ್ಸಾಹವನ್ನು ಹರಡುತ್ತವೆ.

ಪ್ರಪಂಚದಾದ್ಯಂತ ಗಮನ ಸೆಳೆದ ಅಂತಹ ಕೆಲವು ನಿದರ್ಶನಗಳು ಇಲ್ಲಿವೆ.

ವೈರಲ್ ವೀಡಿಯೋವೊಂದರಲ್ಲಿ ಖ್ಯಾತ ಗಾಯಕಿ, ಉದ್ಯಮಿ ರಿಹಾನ್ನಾಗೆ ಪಾಪರಾಜಿಗಳು ನಿಕಿ ಮಿನಾಜ್ ಮತ್ತು ನೀವು ರೂಮ್‌ಮೇಟ್‌ಗಳಾ ಎಂದು ಕೇಳುತ್ತಾ, “ಇಲ್ಲ, ನಾವು ಕೇವಲ ಲೈಂಗಿಕ ಪಾಲುದಾರರು” ಎಂದು ಉಲ್ಲಾಸದಿಂದ ರಿಹಾನ್ನಾ ಪ್ರತಿಕ್ರಿಯಿಸಿದ್ದು ನೋಡುಗರಲ್ಲಿ ನಗುವನ್ನು ಉಂಟುಮಾಡುತ್ತದೆ.

ಅಮೆರಿಕದ ಗಾಯಕಿ ಮತ್ತು ನಟಿ ಆಶ್ಲೇ ಟಿಸ್‌ಡೇಲ್ ಮತ್ತು ವನೆಸ್ಸಾ ಹಡ್ಜೆನ್ಸ್ ಅವರು ಮೆಕ್‌ಡೊನಾಲ್ಡ್ ನಲ್ಲಿ ಆರ್ಡರ್ ಮಾಡಲು ಪ್ರಯತ್ನಿಸುತ್ತಿದ್ದಾಗ, ಪಾಪರಾಜಿಗಳು ಎದುರಾಗಿದ್ದು ಪ್ರಶ್ನಿಸಿದಾಗ ಗಾಯಕಿಯ ನಾಲಿಗೆ ಜಾರುವಿಕೆ (slip of the tongue) ನಗುವಿಗೆ ಕಾರಣವಾಯಿತು.

ಐಸ್‌ಲ್ಯಾಂಡಿಕ್ ಗಾಯಕಿ ಬ್ಜೋರ್ಕ್ ಬ್ಯಾಂಕಾಕ್‌ನಲ್ಲಿ ವರದಿಗಾರನ ಆಕ್ರಮಣಕಾರಿ ಪ್ರಶ್ನೆಯಿಂದ ತನ್ನ ಶಾಂತತೆಯನ್ನು ಕಳೆದುಕೊಂಡು ಆತನ ತಲೆ ಮೇಲೆ ಹೊಡೆದಿದ್ದು ಕೂಡ ವೈರಲ್ ಆಯಿತು.

ಪಾಪರಾಜಿ ಮೇಲೆ ಅಮೆರಿಕದ ಗಾಯಕಿ ಬ್ರಿಟ್ನಿ ಸ್ಪಿಯರ್ಸ್‌ ಪಾನೀಯ ಎಸೆದಾಗ ಆಕೆಯ ಅನಿರೀಕ್ಷಿತ ವರ್ತನೆ ಹೆಚ್ಚು ಚರ್ಚೆಯಾಯಿತು. ಬ್ರಿಟ್ನಿ ಈ ರೀತಿ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಪಾಪಿರಾಜಿಗಳ ಮೇಲೆ ಅವರು ಮಿಲ್ಕ್ ಶೇಕ್ ಎಸೆದಿದ್ದರು.

2002 ರಿಂದ 2007 ರವರೆಗಿನ ಸ್ಯಾಮ್ ರೈಮಿಯ ಸ್ಪೈಡರ್ ಮ್ಯಾನ್ ಟ್ರೈಲಾಜಿಯಲ್ಲಿನ ಪಾತ್ರಕ್ಕಾಗಿ ಜನಪ್ರಿಯವಾಗಿ ಹೆಸರುವಾಸಿಯಾದ ಟೋಬೆ ಮ್ಯಾಗೈರ್, ತನ್ನ ಕಾರ್ ಮುಂದೆ ಹೋಗಲು ಪಾಪರಾಜಿಗಳನ್ನು ಜಾಗ ಬಿಡುವಂತೆ ಪದೇ ಪದೇ ಕೇಳಿದ್ದರು. ಆದರೂ ಜಾಗ ಬಿಡದ ಕಾರಣ ನಿರಾಶೆಗೊಂಡು ಪಾಪರಾಜಿಗಳ ಮೇಲೆ ಕಿರುಚಾಡಿ, ಕಾರ್ ಬಾಗಿಲನ್ನು ಜೋರಾಗಿ ಎಳೆದುಕೊಂಡರು.

ಅಮೆರಿಕಾದ ಗಾಯಕ, ನಟ ಜೋ ಜೋನಾಸ್ ಮತ್ತು ಅವರ ಪತ್ನಿ ಸೋಫಿ ಟರ್ನರ್ ಅವರು ತಮಾಷೆಯ ಮುಖಭಾವಗಳನ್ನು ತೋರಿಸುವ ಮೂಲಕ ಮತ್ತು ಪಾಪರಾಜಿಗಳಿಗೆ ಅವಹೇಳನಕಾರಿ ಚಿಹ್ನೆಗಳನ್ನು ತೋರಿಸಿದ್ದರು.

ಮಾಡೆಲ್ ಕೇಟ್ ಮಾಸ್ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಪಿರಾಜಿಗಳ ಮೇಲೆಯೇ ತನ್ನ ಲಗೇಜ್ ಕಾರ್ಟನ್ನು ಹರಿಸಲು ಮುಂದಾಗಿದ್ದರು. ತನ್ನ ಸುತ್ತಲೂ ಕಿಕ್ಕಿರಿದ ಪಾಪರಾಜಿಗಳ ಮೇಲೆ ಲಗೇಜ್ ಕಾರ್ಟ್ ಓಡಿಸುವ ಮೂಲಕ ತಮಗೆ ಅಡ್ಡಿಪಡಿಸುತ್ತಿದ್ದ ಅವರನ್ನು ಎದುರಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...