alex Certify ಜಾನ್ವಿ ಕಪೂರ್ ಬೀಚ್ ವೈಬ್…..! 3 ಲಕ್ಷ ರೂ. ಮೌಲ್ಯದ ಮಿನಿ ಸ್ಕರ್ಟ್ ನಲ್ಲಿ ಮಿಂಚಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾನ್ವಿ ಕಪೂರ್ ಬೀಚ್ ವೈಬ್…..! 3 ಲಕ್ಷ ರೂ. ಮೌಲ್ಯದ ಮಿನಿ ಸ್ಕರ್ಟ್ ನಲ್ಲಿ ಮಿಂಚಿದ ನಟಿ

ದಿವಗಂತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ 25ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಅವರು ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಜಾನ್ವಿ ನಂಬಲಾಗದ ಉಡುಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಶೂಟ್‌ಗಾಗಿ ಜಾನ್ವಿಯ ಬೀಚ್ ವೈಬ್ ತರಹದ ಉಡುಪು ಧರಿಸಿದ್ದಾರೆ. ಅವರು ಸೀಶೆಲ್ ಆಕಾರದ ಬಹುಕಾಂತೀಯ ಕಸೂತಿ ಮಿನಿ ಸ್ಕರ್ಟ್ ಅನ್ನು ಧರಿಸಿದ್ದಾರೆ. ಫಳಫಳನೆ ಹೊಳೆಯುವ ಸ್ಕರ್ಟ್‌ನಲ್ಲಿ ಹೇರಳವಾದ ಮಿನುಗುಗಳನ್ನು ಕಸೂತಿ ಮಾಡಲಾಗಿದೆ.

ಜಾನ್ವಿ ಕಪೂರ್ ಸ್ಕರ್ಟ್ ಜೊತೆಗೆ ವೋಗ್ ಕ್ರಾಪ್ ಟಾಪ್ ಜೋಡಿಸಿದ್ದಾರೆ. ರತ್ನ ಮತ್ತು ಮುತ್ತಿನಿಂದ ತುಂಬಿದ, ಕ್ರಾಪ್ ಟಾಪ್ ಅದರ ಮೇಲೆ ಸೀಶೆಲ್ ಅನ್ನು ಕಸೂತಿ ಮಾಡಲಾಗಿದೆ. ಈ ಉಡುಪು ತಯಾರಿಸಲು ಮೂರು ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆಯಂತೆ.

ಜಾನ್ವಿ ಕೊಹ್ಲ್-ರಿಮ್ಡ್ ಮತ್ತು ಮಸ್ಕರಾ ಹಾಕಿರೋ ಕಣ್ಣುಗಳಿಂದ ಮೋಹಕವಾಗಿ ಕಂಡಿದ್ದಾರೆ. ತುಟಿಗಳ ಮೇಲೆ ಸಣ್ಣನಗೆಯೊಂದು ಹಾಗೆ ಜಾರಿ ಹೋದಂತೆ ಭಾಸವಾಗುತ್ತಿದೆ. ಸದ್ಯ, ಈ ಫೋಟೋ ಅವರ ಅಭಿಮಾನಿಗಳ ಕಣ್ಮನ ಸೆಳೆದ್ರೆ, ಪಡ್ಡೆ ಹೈಕಳ ನಿದ್ದೆ ಕದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...