alex Certify ಜಾಗತಿಕ ಶ್ರೇಣಿಯಲ್ಲಿ ಸುಧಾರಣೆ ಕಂಡ ಭಾರತೀಯ ಪಾಸ್‌ಪೋರ್ಟ್, 60 ದೇಶಗಳಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗತಿಕ ಶ್ರೇಣಿಯಲ್ಲಿ ಸುಧಾರಣೆ ಕಂಡ ಭಾರತೀಯ ಪಾಸ್‌ಪೋರ್ಟ್, 60 ದೇಶಗಳಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ

2022 ರ ಮೊದಲ ತ್ರೈಮಾಸಿಕದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಮಂಗಳವಾರ ಅಪ್ಡೇಟ್ ಆಗಿದ್ದು, ಭಾರತೀಯ ಪಾಸ್‌ಪೋರ್ಟ್ ಸುಧಾರಣೆ ತೋರಿಸಿದೆ. 2021 ಕ್ಕೆ ಹೋಲಿಸಿದರೆ, ಭಾರತದ ಪಾಸ್‌ಪೋರ್ಟ್ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಏಳು ಸ್ಥಾನಗಳ ಏರಿಕೆ ಕಂಡಿದ್ದು ಈಗ 83 ನೇ ಸ್ಥಾನದಲ್ಲಿದೆ. 2021 ರಲ್ಲಿ 90 ನೇ ಸ್ಥಾನದಲ್ಲಿತ್ತು. ಭಾರತದ ಮುಂದೆ ರುವಾಂಡಾ ಮತ್ತು ಉಗಾಂಡಾ ಇದ್ದು, ಆಫ್ರಿಕನ್ ದ್ವೀಪರಾಷ್ಟ್ರ ಸಾವೊ ಟೋಮ್ ಮತ್ತು ಪ್ರಿನ್ಸಿಪಿಯೊಂದಿಗೆ 83ನೇ ಸ್ಥಾನವನ್ನ ಹಂಚಿಕೊಂಡಿದೆ‌.

ಪಾಸ್‌ಪೋರ್ಟ್‌ಗಳನ್ನು ಶ್ರೇಣೀಕರಿಸುವಾಗ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅವುಗಳಲ್ಲಿ ಮುಖ್ಯ ಅಂಶ ಪೂರ್ವ ವೀಸಾ ಇಲ್ಲದೆ ಪ್ರವೇಶಿಸಬಹುದಾದ ಸ್ಥಳಗಳ ಸಂಖ್ಯೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈಗ ಪೂರ್ವ ವೀಸಾ ಇಲ್ಲದೆ 60 ದೇಶಗಳಿಗೆ ಭೇಟಿ ನೀಡಬಹುದು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಕುಕ್ ದ್ವೀಪಗಳು, ಫಿಜಿ, ಸಮೋವಾ, ಇರಾನ್, ಅರ್ಮೇನಿಯಾ, ಜೋರ್ಡಾನ್, ಅಲ್ಬೇನಿಯಾ, ಸೆರ್ಬಿಯಾ, ಟ್ರಿನಿಡಾಡ್- ಟೊಬಾಗೊ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ , ಭೂತಾನ್, ನೇಪಾಳ, ಥೈಲ್ಯಾಂಡ್, ಬೊಲಿವಿಯಾ ಸೇರಿದಂತೆ 60 ದೇಶಗಳಿಗೆ ತಲುಪಿದ ನಂತರ ವೀಸಾ ಪಡೆಯಬಹುದು ಇದನ್ನು ವೀಸಾ ಆನ್ ಅರೈವಲ್ (VOA) ಎನ್ನುತ್ತಾರೆ.

ಸೂಚ್ಯಂಕವು 199 ದೇಶಗಳ ಪಾಸ್‌ಪೋರ್ಟ್‌ಗಳನ್ನು ಮತ್ತು 227 ವಿವಿಧ ಪ್ರಯಾಣದ ಸ್ಥಳಗಳನ್ನು ಒಳಗೊಂಡಿದೆ. 2022ರ ಮೊದಲ ಸೂಚ್ಯಂಕದಲ್ಲಿ, ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವು ಜಪಾನ್ ಮತ್ತು ಸಿಂಗಾಪುರಕ್ಕೆ ಮೊದಲ ಸ್ಥಾನ ನೀಡಿದೆ. ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಎರಡನೇ ಸ್ಥಾನವನ್ನು ಜರ್ಮನಿ ಮತ್ತು ದಕ್ಷಿಣ ಕೊರಿಯಾ ಪಡೆದುಕೊಂಡಿದೆ. ಸ್ಪೇನ್, ಫಿನ್‌ಲ್ಯಾಂಡ್, ಇಟಲಿ ಮತ್ತು ಲಕ್ಸೆಂಬರ್ಗ್‌ ಗಳಿಗೆ ಮೂರನೇ ಸ್ಥಾನವನ್ನು ನೀಡಲಾಗಿದೆ. ಜಪಾನೀಸ್, ಫಿನ್ನಿಶ್ ಮತ್ತು ಐರಿಶ್ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ 180 ಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...