alex Certify ಜಗತ್ತಿನ ಬೆಸ್ಟ್‌ ಬಾಸ್‌ ಎನಿಸಿಕೊಂಡಿರೋ ಈ ಮಹಿಳೆ ಸಿಬ್ಬಂದಿಗೆ ಕೊಟ್ಟಿದ್ದಾಳೆ ಭರ್ಜರಿ ಬೋನಸ್‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಬೆಸ್ಟ್‌ ಬಾಸ್‌ ಎನಿಸಿಕೊಂಡಿರೋ ಈ ಮಹಿಳೆ ಸಿಬ್ಬಂದಿಗೆ ಕೊಟ್ಟಿದ್ದಾಳೆ ಭರ್ಜರಿ ಬೋನಸ್‌ !

ಅಮೆರಿಕದಲ್ಲಿ ಒಳಉಡುಪು ಕಂಪನಿ ನಡೆಸ್ತಾ ಇರೋ ಮಹಿಳೆಯೊಬ್ಬಳು ಜಗತ್ತಿನ ಬೆಸ್ಟ್‌ ಬಾಸ್‌ ಎನಿಸಿಕೊಂಡಿದ್ದಾಳೆ. ಕಾರಣ ತನ್ನ ಕಂಪನಿಯ ಸಿಬ್ಬಂದಿಗೆ ಈಕೆ ಬೋನಸ್‌ ಆಗಿ 8 ಲಕ್ಷ ರೂಪಾಯಿ ಜೊತೆಗೆ ಎರಡು ವಿಮಾನ ಟಿಕೆಟ್‌ಗಳನ್ನು ಸಹ ನೀಡಿದ್ದಾಳೆ.

ಸಾರಾ ಬ್ಲಾಕ್ಲಿ ಸ್ಪಾಂಕ್ಸ್‌ ಎಂಬ ಒಳ ಉಡುಪು ಕಂಪನಿಯನ್ನು ನಡೆಸ್ತಿದ್ದಾಳೆ. ಎಲ್ಲಾದ್ರೂ ಪ್ರವಾಸ ಹೋಗಿಬರಲಿ ಅನ್ನೋ ಕಾರಣಕ್ಕೆ ತಲಾ ಎರಡು ಫಸ್ಟ್‌ ಕ್ಲಾಸ್‌ ಟಿಕೆಟ್‌ ಕೊಟ್ಟಿದ್ದಾಳೆ ಸಾರಾ. ಪ್ರವಾಸ ಹೋದಮೇಲೆ ಅಲ್ಲಿ ಉಳಿದುಕೊಳ್ಳಲು ಹಣ ಬೇಕು. ಊಟ, ಉಪಹಾರ, ಸುತ್ತಾಟಕ್ಕೂ ಸಾಕಷ್ಟು ಖರ್ಚಾಗುತ್ತದೆ.

ಹಾಗಾಗಿ ಅದನ್ನೆಲ್ಲ ನಿಭಾಯಿಸಲೆಂದೇ ತನ್ನ ಸಂಸ್ಥೆಯ ಸಿಬ್ಬಂದಿಗೆ ತಲಾ 8 ಲಕ್ಷ ರೂಪಾಯಿ ಹಣವನ್ನೂ ನೀಡಿದ್ದಾಳೆ. ಕಂಪನಿಯನ್ನು ಆರಂಭಿಸಿ 21 ವರ್ಷಗಳಾದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಬೋನಸ್‌ ಸಿಕ್ಕಿದೆ. ಈ ಕ್ಷಣವನ್ನು ಎಂಜಾಯ್‌ ಮಾಡುವಂತೆ ಸಾರಾ ತನ್ನ ಸಿಬ್ಬಂದಿಗೆ ಸೂಚಿಸಿದ್ದಾಳೆ.

ವಿಶೇಷವಾಗಿ ಮಹಿಳೆಯರಿಗೆ ಇಷ್ಟಬಂದಲ್ಲಿ ಸುತ್ತಾಡುವ ಅವಕಾಶ ಕಡಿಮೆ. ನಮ್ಮ ತಾಯಂದಿರು, ಅಜ್ಜಿಯರಿಗಂತೂ ಇಂತಹ ಚಾನ್ಸ್‌ ಸಿಕ್ಕಿರಲಿಕ್ಕಿಲ್ಲ. ಹಾಗಾಗಿ ಮಹಿಳಾ ಸಿಬ್ಬಂದಿ ತಮಗಿಷ್ಟ ಬಂದಕಡೆ ಪ್ರವಾಸ ಹೋಗಿ ಆರಾಮಾಗಿ ಇದ್ದು ಬರಲಿ ಅಂತಾ ಸಾರಾ ಹಾರೈಸಿದ್ದಾಳೆ. ಸಾರಾ ಬ್ಲಾಕ್ಲಿಯನ್ನು ಜಗತ್ತಿನ ಅತಿ ಉತ್ತಮ ಬಾಸ್‌ ಅಂತಾನೇ ಬಣ್ಣಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...