alex Certify ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ ಕೊರೊನಾ; ಮಹಾಮಾರಿಯ ಆರ್ಭಟಕ್ಕೆ ಜನ ತತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ ಕೊರೊನಾ; ಮಹಾಮಾರಿಯ ಆರ್ಭಟಕ್ಕೆ ಜನ ತತ್ತರ

ಜಗತ್ತಿನಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸುತ್ತಿದೆ. ಹಲವು ದೇಶಗಳು ಮಹಾಮಾರಿಗೆ ತತ್ತರಿಸಿ ಹೋಗುತ್ತಿರುವುದು ಅಂಕಿ- ಅಂಶಗಳಿಂದ ಸಾಬೀತಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ಜಗತ್ತಿನಲ್ಲಿ ಬರೋಬ್ಬರಿ 31,94,780 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 7,792 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಪೈಕಿ ಅಮೆರಿಕದಲ್ಲಿಯೇ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನ ಅಮೆರಿಕದಲ್ಲಿ 8,27,132 ಜನರಲ್ಲಿ ಸೋಂಕು ಆವರಿಸಿದ್ದು, 2,303 ಜನರು ಬಲಿಯಾಗಿದ್ದಾರೆ.

ಫ್ರಾನ್ ನಲ್ಲಿ ಕಳೆದ 24 ಗಂಟೆಗಳಲ್ಲಿ 3,29,371 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅಲ್ಲಿ ಸಾವಿನ ಸಂಖ್ಯೆ ಕಡಿಮೆ ದಾಖಲಾಗಿರುವುದೇ ಸಮಾಧಾನಕರ ಸಂಗತಿ. ಅಲ್ಲಿ ಈ ಸಂದರ್ಭದಲ್ಲಿ 191 ಜನರು ಬಲಿಯಾಗಿದ್ದಾರೆ.

ಇದೇ ಅವಧಿಯಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ದೇಶದಲ್ಲಿ 2.68 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 430 ಜನರು ಸಾವನ್ನಪ್ಪಿದ್ದಾರೆ.

ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ದಾಖಲಾದರೂ ಸಾವಿನ ಸಂಖ್ಯೆ ಆತಂಕ ಮೂಡಿಸುತ್ತಿದೆ. ಅಲ್ಲಿ ಒಂದೇ ದಿನ 23,820 ಜನರಲ್ಲಿ ಸೋಂಕು ಕಾಣಿಸಿಕೊಂಡರೆ 739 ಜನರು ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ ಇಟಲಿಯಲ್ಲಿ 1,86,253, ಸ್ಪೇನ್ ನಲ್ಲಿ 1,62,508, ಅರ್ಜೆಂಟೀನಾದಲ್ಲಿ 1,39,853, ಆಸ್ಟ್ರೇಲಿಯಾದಲ್ಲಿ 1,34,508, ಬ್ರೆಜಿಲ್ ನಲ್ಲಿ 1,11,376, ಬ್ರಿಟನ್ ನಲ್ಲಿ 99,652 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಗತ್ತಿನಲ್ಲಿನ ಸರಾಸರಿ 170ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪ್ರತಿ ದಿನ ಸೋಂಕಿತರು ಪತ್ತೆಯಾಗುತ್ತಿದ್ದು, ಎಲ್ಲೆಡೆಯೂ ಸೋಂಕಿಗೆ ಹಲವಾರು ಜನರು ಬಲಿಯಾಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...