alex Certify ಛಾಯಾಗ್ರಾಹಕನಿಗೆ ಮುಖಾಮುಖಿಯಾದ ಶಾರ್ಕ್: ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛಾಯಾಗ್ರಾಹಕನಿಗೆ ಮುಖಾಮುಖಿಯಾದ ಶಾರ್ಕ್: ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್..!

ಪ್ರತಿದಿನ ಸಾವಿರಾರು ಶಾರ್ಕ್ ಫೋಟೋಗಳು ಮತ್ತು ವಿಡಿಯೋಗಳನ್ನು ವೃತ್ತಿಪರರು ಕ್ಲಿಕ್ಕಿಸುತ್ತಾರೆ. ಆದರೆ, ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ವೈರಲ್ ಆಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನಿಮ್ಮನ್ನು ಬೆರಗುಗೊಳಿಸುತ್ತದೆ.

ಛಾಯಾಗ್ರಾಹಕರ ಸಮಯ, ಹಿನ್ನಲೆ, ಧೈರ್ಯ ಹಾಗೂ ಅದೃಷ್ಟದಿಂದಾಗಿ ಈ ವಿಡಿಯೋ ಉಳಿದವುಗಳಿಗಿಂತ ಭಿನ್ನವಾಗಿವೆ. ಹೌದು, ಡೇವಿಡ್ ಶೆರರ್ ಎಂಬ ಸ್ಪಿಯರ್‌ ಫಿಶರ್‌ಮನ್ ಉತ್ತರ ಕೆರೊಲಿನಾದಲ್ಲಿ ಡೈವಿಂಗ್ ಮಾಡುವಾಗ ಅದ್ಭುತವಾದ ಶಾರ್ಕ್ ತುಣುಕನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು ಡೇವಿಡ್ ಶೆರರ್ ನೀರಿಗೆ ಧುಮುಕಿದ್ದಾರೆ. ಈ ವೇಳೆ ಆತ ದೊಡ್ಡ ಬಿಳಿ ಶಾರ್ಕ್ ಜೊತೆ ಮುಖಾಮುಖಿಯಾಗಿದ್ದಾರೆ. ಆ ಕ್ಷಣ ಹೇಗಿತ್ತು ಅನ್ನೋದನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ಡೇವಿಡ್ ಗೆ ಮುಖಾಮುಖಿಯಾದ ಶಾರ್ಕ್ ವಿಡಿಯೋ ಇದೀಗ ವೈರಲ್ ಆಗಿದೆ.

ಶಾರ್ಕ್ ತನ್ನತ್ತ ಬರುತ್ತಿದ್ದಂತೆ ಆಕ್ರಮಣದ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈಟಿಯನ್ನು ಹಿಡಿದಿದ್ದರು. ಬಳಿಕ ಶಾರ್ಕ್ ತಿರುಗಿ ಮುಂದಕ್ಕೆ ಹೋಗಿದೆ. ಈ ವಿಡಿಯೋವನ್ನು ಡೇವಿಡ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...