alex Certify ಚಾಲಕನಾಗಿ ಎಂಟ್ರಿ ಕೊಟ್ಟ ʼಊಬರ್​ʼ ಇಂಡಿಯಾ ಬಾಸ್​ ಪ್ರಭಜೀತ್​ ಸಿಂಗ್​..! ಪ್ರಯಾಣಿಕರಿಗೆ ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಾಗಿ ಎಂಟ್ರಿ ಕೊಟ್ಟ ʼಊಬರ್​ʼ ಇಂಡಿಯಾ ಬಾಸ್​ ಪ್ರಭಜೀತ್​ ಸಿಂಗ್​..! ಪ್ರಯಾಣಿಕರಿಗೆ ಶಾಕ್​

ಊಹಿಸಿಕೊಳ್ಳಿ. ಕಚೇರಿಗೆ ಹೊರಡಲು ನಿಮಗೆ ತಡವಾಗಿರುತ್ತದೆ. ನೀವು ಊಬರ್​ ಅಪ್ಲಿಕೇಶನ್​ ಮೂಲಕ ಕ್ಯಾಬ್​ ಬುಕ್​ ಮಾಡಿರುತ್ತೀರಿ. ಅದು ಸರಿಯಾದ ಸಮಯಕ್ಕೆ ಬರುತ್ತದೋ ಇಲ್ಲವೋ ಎಂಬ ಆತಂಕ ಒಂದೆಡೆ ಇರುತ್ತದೆ. ಈ ಎಲ್ಲಾ ಆತಂಕದ ನಡುವೆ ಕ್ಯಾಬ್​ ನಿಮ್ಮ ಮನೆ ಮುಂದೆ ಬರುತ್ತದೆ. ಅಲ್ಲಿ ಇರುವ ಡ್ರೈವರ್​​ ಬೇರಾರೂ ಅಲ್ಲ ಬದಲಾಗಿ ಸ್ವತಃ ಊಬರ್ ಮುಖ್ಯಸ್ಥನೇ ಆದರೆ ನಿಮಗೆ ಎಷ್ಟು ಆಶ್ಚರ್ಯ ಎನಿಸಬಹುದು..? ಅಂದಹಾಗೆ ಇದೇನು ಕಟ್ಟು ಕತೆಯಲ್ಲ. ಊಬರ್​​ನ ಭಾರತ ಹಾಗೂ ದಕ್ಷಿಣ ಏಷ್ಯಾದ ಅಧ್ಯಕ್ಷರಾದ ಪ್ರಭಜೀತ್​ ಸಿಂಗ್​​ ಊಬರ್​ ಚಾಲಕನಾಗಿ ಕಾರ್ಯನಿರ್ವಹಿಸಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೆಲವರು ಊಬರ್​ ಗ್ರಾಹಕರು ತಮಗಾದ ಈ ಅನುಭವವನ್ನು ಲಿಂಕ್​ಡಿನ್​ನಲ್ಲಿ ಹಂಚಿಕೊಂಡಿದ್ದಾರೆ. ಪ್ರಭಜೀತ್​ ಸಿಂಗ್​ ಒಂದು ಸಂಶೋಧನೆಯ ಭಾಗವಾಗಿ ಹೀಗೆ ರಸ್ತೆಗೆ ಇಳಿದಿದ್ದಾರೆ ಎನ್ನಲಾಗಿದೆ.

ಲಿಂಕ್​ಡಿನ್​ ಬಳಕೆದಾರರಾದ ಅನನ್ಯಾ ದ್ವಿವೇದಿ ಪ್ರಭಜೀತ್​ ಸಿಂಗ್​​ ಜೊತೆಯಲ್ಲಿ ಸ್ಪೆಷಲ್​ ಊಬರ್​ ರೈಡ್​ಗೆ ತೆರಳಿದ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಆಫೀಸಿಗೆ ತೆರಳಲು ಕ್ಯಾಬ್​ ಬುಕ್ ಮಾಡಿದ್ದ ವೇಳೆಯಲ್ಲಿ ನನಗೆ ಚಾಲಕರಾಗಿ ಊಬರ್​ ಬಾಸ್​ ಬಂದಿದ್ದಾರೆ ಎಂಬ ವಿಚಾರವನ್ನು ಮೊದಲು ನಂಬಲು ಸಾಧ್ಯವಾಗಲಿಲ್ಲ. ಬಳಿಕ ನಾನು ಗೂಗಲ್​ ಮಾಡಿ ಈ ವಿಚಾರವನ್ನು ದೃಢಪಡಿಸಿಕೊಂಡೆ. ಅವರು ಯಾವುದೋ ಸಂಶೋಧನೆಯ ಭಾಗವಾಗಿ ಈ ರೀತಿ ಕ್ಯಾಬ್​ ಚಾಲನೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ಇನ್ನೂ ಅನೇಕರು ಈ ರೀತಿ ತಮ್ಮ ಅನುಭವವನ್ನು ಶೇರ್​ ಮಾಡಿದ್ದು ಊಬರ್​ ಸರ್ವೀಸ್​ನ್ನು ಸುಧಾರಿಸಲು ಕಂಪನಿಯ ಬಾಸ್​ ಈ ರೀತಿ ಸರಳತೆ ಮೆರೆದಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...