alex Certify ಗ್ಯಾಂಗ್ ರೇಪ್ ಪ್ರಕರಣ: ಮೊದಲು ಬೇರೆಯದೇ ಪ್ಲಾನ್ ಮಾಡಿದ್ದ ಅತ್ಯಾಚಾರ ಆರೋಪಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಂಗ್ ರೇಪ್ ಪ್ರಕರಣ: ಮೊದಲು ಬೇರೆಯದೇ ಪ್ಲಾನ್ ಮಾಡಿದ್ದ ಅತ್ಯಾಚಾರ ಆರೋಪಿಗಳು

ಮೈಸೂರು: ಮೈಸೂರು ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ಬಂಧನವಾಗುತ್ತಿದ್ದಂತೆ ಹಲವು ಆತಂಕಕಾರಿ ಮಾಹಿತಿಗಳು ಲಭ್ಯವಾಗುತ್ತಿವೆ.

ಗ್ಯಾಂಗ್ ರೇಪ್ ಪ್ರಕರಣದ ಐದು ಆರೋಪಿಗಳನ್ನು ಹೊರ ರಾಜ್ಯದಲ್ಲಿ ಬಂಧಿಸಿರುವ ಪೊಲೀಸರು ಮೈಸೂರಿಗೆ ಕರೆತಂದಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಪ್ರಾಥಮಿಕ ಮಾಹಿತಿ ಪ್ರಕಾರ, ಎಲ್ಲರೂ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ, ಮೂವರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.

ಮೊದಲಿಗೆ ಆರೋಪಿಗಳು ರಾಬರಿ ಮಾಡಿ ಬಿಟ್ಟುಬಿಡುವ ಪ್ಲಾನ್ ಮಾಡಿದ್ದರು. ಆದರೆ ಮೂವರು ಆರೋಪಿಗಳು ಯುವತಿ ಮೇಲೆ ಅತ್ಯಾಚಾರ ನಡೆಸಲು ಯೋಚಿಸಿದ್ದರು. ಉಳಿದ ಆರೋಪಿಗಳು ವಿರೋಧ ಸಹ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

BIG NEWS: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ತಮಿಳುನಾಡಿನಿಂದ ಮೈಸೂರು ಮಂಡಿಗಳಿಗೆ ಬಾಳೆ ಸಪ್ಲೈ ಮಾಡುತ್ತಿದ್ದ ಆರೋಪಿಗಳಿಗೆ ಘಟನಾ ಸ್ಥಳ ಖಾಯಂ ಅಡ್ಡಾ ಆಗಿತ್ತು. ಮೂರು ದಿನಗಳಿಂದ ಯುವತಿ ಹಾಗೂ ಆಕೆ ಸ್ನೇಹಿತ ಅದೇ ಸ್ಥಳಕ್ಕೆ ಬರುತ್ತಿರುವುದನ್ನು ಫಾಲೋ ಮಾಡಿ, ನಾಲ್ಕನೇ ದಿನ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಮೈಸೂರಿಗೆ ಕರೆ ತಂದಿರುವ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದು, ಸಂಪೂರ್ಣ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...