alex Certify BIG NEWS: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಕೇರಳ, ತಮಿಳು ನಾಡು ಹಾಗೂ ಕರ್ನಾಟಕದಲ್ಲಿ ಇಂದಿನಿಂದ ಆಗಸ್ಟ್​ 30ರವರೆಗೆ ಭಾರೀ ಮಳೆ ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿದೆ.

ಮುಂಬರುವ 2 ದಿನಗಳಲ್ಲಿ (ಆಗಸ್ಟ್​ 29 ಹಾಗೂ 30) ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಭಾರೀ ಮಳೆ ಸಂಭವಿಸಲಿದೆ.

ಶನಿವಾರ ಹಾಗೂ ಭಾನುವಾರ ತಮಿಳುನಾಡು ಘಟ್ಟ ಪ್ರದೇಶ , ಕೇರಳ ಹಾಗೂ ಮಾಹೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇರಳದಲ್ಲಿ ಅತೀಯಾಗಿ ಮಳೆ ಸಂಭವಿಸುವ ಮುನ್ಸೂಚನೆ ಹಿನ್ನೆಲೆ ಹವಾಮಾನ ಇಲಾಖೆಯು ಕೇರಳದ ಆರು ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಆರೆಂಜ್​ ಅಲರ್ಟ್ ಘೋಷಣೆ ಮಾಡಿದೆ.

ಇಡುಕ್ಕಿ, ಪಲಕ್ಕಾಡ್​, ಮಲಪ್ಪುರಂ, ಕೊಝಿಕೋಡೆ, ವಯ್ನಾಡ್​ ಹಾಗೂ ಕಣ್ಣೂರು ಆರೆಂಜ್​ ಅಲರ್ಟ್ ಘೋಷಣೆಯಾದ ಕೇರಳದ ಜಿಲ್ಲೆಗಳಾಗಿವೆ. ನೈಋತ್ಯ ಮುಂಗಾರು ಕೇರಳದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಐಎಂಡಿ ಹೇಳಿದೆ.

ಅಲ್ಲದೇ ಮೀನುಗಾರರಿಗೂ ಕೂಡ ಆಗಸ್ಟ್​ 30ರವರೆಗೆ ಮೀನುಗಾರಿಕೆ ನಡೆಸದಂತೆ ಮುನ್ಸೂಚನೆ ನೀಡಲಾಗಿದೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...