alex Certify ಗೋಮೂತ್ರದಿಂದ ಕ್ಯಾನ್ಸರ್ ವಾಸಿ; ಬಿಪಿ – ಶುಗರ್ ಅಲೋಪತಿಯಿಂದ ಗುಣಪಡಿಸಲು ಸಾಧ್ಯವಿಲ್ಲ: ಬಾಬಾ ರಾಮದೇವ್ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಮೂತ್ರದಿಂದ ಕ್ಯಾನ್ಸರ್ ವಾಸಿ; ಬಿಪಿ – ಶುಗರ್ ಅಲೋಪತಿಯಿಂದ ಗುಣಪಡಿಸಲು ಸಾಧ್ಯವಿಲ್ಲ: ಬಾಬಾ ರಾಮದೇವ್ ಹೇಳಿಕೆ

ಅಲೋಪತಿ ವೈದ್ಯಕೀಯ ಪದ್ಧತಿ ವಿರುದ್ಧ ಸದಾ ಕಿಡಿ ಕಾರುವ ಪತಂಜಲಿಯ ಬಾಬಾ ರಾಮದೇವ್ ಈಗ ಮತ್ತೆ ಅದನ್ನು ಮುಂದುವರಿಸಿದ್ದಾರೆ. ಅಲೋಪತಿ ವೈದ್ಯಕೀಯ ಪದ್ಧತಿ ಮೂಲಕ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಉತ್ತರಕಾಂಡ ಆಯುರ್ವೇದ ವಿವಿ ಆಯೋಜಿಸಿದ್ದ 2023ರ ಅಂತರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಈ ಮಾತುಗಳನ್ನು ಹೇಳಿದ್ದು, ಆದರೆ ಆಯುರ್ವೇದದಲ್ಲಿ ಇವುಗಳನ್ನು ಬುಡ ಸಮೇತವಾಗಿ ಗುಣಪಡಿಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಅಲ್ಲದೆ ಗೋಮೂತ್ರದಲ್ಲಿನ ಕೆಲವು ಪುಷ್ಠಿಕರ ಅಂಶಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಮದ್ದುಗಳೊಂದಿಗೆ ಬೆರೆಸಿ ಸೇವಿಸಿದಾಗ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಿರುವ ಹಲವು ಉದಾಹರಣೆಗಳಿವೆ, ಹಾಗೆಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆಗೂ ಆಯುರ್ವೇದದಲ್ಲಿ ಮದ್ದಿದೆ ಎಂದು ಸಹ ಬಾಬಾ ರಾಮದೇವ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...