alex Certify ಗೋಮಾಂಸ ಸಾಗಿಸುತ್ತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಮಾಂಸ ಸಾಗಿಸುತ್ತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು..!

ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆಯು ಮಥುರಾದ ಗ್ರಾಮವೊಂದರಲ್ಲಿ ನಡೆದಿದೆ. ಮಥುರಾದ ಖುಷಿಪುರ ತಿರಾಹಾ ಬಳಿಯ ಛಟಿಕಾರ ರಾಧಾಕುಂಡ್​ ರಸ್ತೆಯಲ್ಲಿ ಗೋ ಮಾಂಸ ಸಾಗಿಸುತ್ತಿದ್ದ ಟ್ರಕ್​ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ.
ಟ್ರಕ್​ ಪಲ್ಟಿಯಾಗುತ್ತಿದ್ದಂತೆಯೇ ಗೋಮಾಂಸ ಹೊರಗೆ ಚೆಲ್ಲಿದೆ. ಇದನ್ನು ನೋಡಿದ ಗ್ರಾಮಸ್ಥರು ರಸ್ತೆ ತಡೆ ನಡೆಸಿದ್ದಾರೆ. ಪೊಲೀಸರ ಮನವಿ ಬಳಿಕವೂ ಜಗ್ಗದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿಯು ವಿಕೋಪಕ್ಕೆ ತಿರುಗುತ್ತಿರುವುದು ಗಮನಕ್ಕೆ ಬಂಧ ಬಳಿಕ ಟ್ರಕ್​​ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಇವರಲ್ಲಿ ಒಬ್ಬಾತನನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.
ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ ಚಲಿಸುತ್ತಿದ್ದ ಎಸ್​ಯುವಿಯು ಟ್ರಕ್​ನ ಮೇಲೆ ಕಣ್ಣಿಟ್ಟಿತ್ತು. ಆದರೆ ಅವಘಡ ಸಂಭವಿಸುತ್ತಿದ್ದಂತೆಯೆ ಎಸ್​ಯುವಿ ಎಸ್ಕೇಪ್​ ಆಗಿದೆ. ಸಿಕ್ಕಿಬಿದ್ದ ವ್ಯಕ್ತಿಯು ತಾನು ಗೋಮಾಂಸವನ್ನು ಗೋವರ್ಧನ್​​ನ ನೀಮ್​​​ಗಾಂವ್​ನಿಂದ ಸಹರನ್​ಪುರಕ್ಕೆ ಇದನ್ನು ತೆಗೆದುಕೊಂಡು ಹೋಗುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾನೆ. ಸತ್ತ ಗೋವುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...