alex Certify ಗಿನ್ನೆಸ್​ ದಾಖಲೆಗಾಗಿ ಮೈತುಂಬಾ ಟ್ಯಾಟೂ; ದಂಪತಿಯಿಂದ 98 ಬಾರಿ ಬಾಡಿ ಮಾಡಿಫಿಕೇಷನ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನೆಸ್​ ದಾಖಲೆಗಾಗಿ ಮೈತುಂಬಾ ಟ್ಯಾಟೂ; ದಂಪತಿಯಿಂದ 98 ಬಾರಿ ಬಾಡಿ ಮಾಡಿಫಿಕೇಷನ್​…!

ಜನರು ಮೈಮೇಲೆಲ್ಲಾ ಟ್ಯಾಟೂ ಹಾಕಿಸಿಕೊಳ್ಳುವುದು ಮಾಮೂಲು. ಆದರೆ ಇಲ್ಲೊಂದು ದಂಪತಿ ಟ್ಯಾಟೂವಿನಲ್ಲಿಯೇ ಗಿನ್ನೆಸ್​ ದಾಖಲೆ ಬರೆದಿದ್ದಾರೆ ! ಅರ್ಜೆಂಟೀನಾದ ದಂಪತಿ, ಗೇಬ್ರಿಯೆಲಾ ಪೆರಾಲ್ಟಾ ಮತ್ತು ವಿಕ್ಟರ್ ಹ್ಯೂಗೋ ಪೆರಾಲ್ಟಾ ಅವರು ಅತಿ ಹೆಚ್ಚು ದೇಹದ ಮಾರ್ಪಾಡುಗಳಿಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.

ಈ ದಂಪತಿ ದೇಹದ ತುಂಬೆಲ್ಲಾ ಟ್ಯಾಟೂ (ಹಚ್ಚೆ) ಹಾಕಿಸಿಕೊಂಡಿರುವುದು ಒಂದೆಡೆಯಾದರೆ, ದೇಹದ ಹಲವಾರು ಅಂಗಗಳನ್ನು ಮಾರ್ಪಾಡು ಮಾಡಿಕೊಂಡಿದ್ದು, ದಾಖಲೆ ಪುಟ ಸೇರಿದ್ದಾರೆ. ಅವರು ಸುಮಾರು 98 ಬಾರಿ ಬಾಡಿ ಮಾಡಿಫಿಕೇಶನ್ ಮಾಡಿಸಿದ್ದಾರೆ.

ದಂಪತಿಯ ಕಣ್ಣುಗಳ ಬಿಳಿ ಭಾಗದಲ್ಲಿ ಸಹ ಹಚ್ಚೆ ಹಾಕಲಾಗಿದೆ. ಮಾತ್ರವಲ್ಲ ದೇಹದಾದ್ಯಂತ 50 ಚುಚ್ಚುವಿಕೆಗಳು, ಎಂಟು ಮೈಕ್ರೊಡರ್ಮಲ್‌ಗಳು, 14 ದೇಹ ಇಂಪ್ಲಾಂಟ್‌ಗಳು, ಐದು ದಂತ ಕಸಿಗಳು, ನಾಲ್ಕು ಇಯರ್ ಎಕ್ಸ್ಪಾಂಡರ್‌ಗಳು, ಎರಡು ಇಯರ್ ಬೋಲ್ಟ್‌ಗಳು ಮತ್ತು ಒಂದು ಫೋರ್ಕ್ಡ್ ನಾಲಿಗೆ ಮಾಡಿಸಿಕೊಂಡಿದ್ದಾರೆ.

ಟ್ಯಾಟೂಗಳು ನಿಮ್ಮನ್ನು ಒಳ್ಳೆಯ ಅಥವಾ ಕೆಟ್ಟ ವ್ಯಕ್ತಿಯನ್ನಾಗಿ ಮಾಡುವುದಿಲ್ಲ. ಇದೊಂದು ಕಲೆ ಅಷ್ಟೇ. ಕೆಲವರು ಇದನ್ನು ಮೆಚ್ಚುತ್ತಾರೆ, ಕೆಲವರಿಗೆ ಇಷ್ಟವಾಗುವುದಿಲ್ಲ” ಎನ್ನುತ್ತಾರೆ ದಂಪತಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...