alex Certify ಗರ್ಭ ಧರಿಸಿದ್ದ ಈ ಮಹಿಳೆಯ ಗೆಳೆಯ….! ಬಾತ್ರೂಮಿನಲ್ಲೇ ಆಯ್ತು ʼಹೆರಿಗೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭ ಧರಿಸಿದ್ದ ಈ ಮಹಿಳೆಯ ಗೆಳೆಯ….! ಬಾತ್ರೂಮಿನಲ್ಲೇ ಆಯ್ತು ʼಹೆರಿಗೆʼ

ಅಮೆರಿಕದಲ್ಲಿ ನೆಲೆಸಿರುವ 27 ವರ್ಷದ ನಿನೋ ಮತ್ತು 22 ವರ್ಷದ ಗೆಳತಿ ಜೋಸ್ಲಿನ್‌, ಟ್ರಾನ್‌ಜೆಂಡರ್‌ ದಂಪತಿ. ಆನ್‌ಲೈನ್‌ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ.

ಗೆಳೆಯ ನಿನೋಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಶುರುವಾಗಿತ್ತಂತೆ. ಕಾರಣ ತಿಳಿದಾಗ ಇಬ್ಬರಿಗೂ ಶಾಕ್‌ ಆಗಿತ್ತು. ಆತ ಗರ್ಭಧರಿಸಿದ್ದ, ಸ್ನಾನದ ಕೋಣೆಯಲ್ಲೇ ಆತನಿಗೆ ಹೆರಿಗೆಯಾಗಿದೆಯಂತೆ. ಆತ ಮಗುವಿಗೆ ಜನ್ಮ ನೀಡಿದ್ದಾನೆ.

ಜೋಸ್ಲಿನ್ ಜೊತೆಗಿನ ಭೇಟಿ ಬಳಿಕ ನಿನೋ ಹೆಣ್ಣಾಗಿ ರೂಪಾಂತರಗೊಂಡಿದ್ದ. ಲಿಂಗ ಬದಲಾವಣೆಗೆ ಹಾರ್ಮೋನ್‌ ಚಿಕಿತ್ಸೆ ಪಡೆದಿದ್ದ. ಇದೀಗ ನಿನೋ ಗಂಡು ಮಗುವಿಗೆ ತಾಯಿಯಾಗಿದ್ದಾನೆ. ತುಂಬಾನೇ ಸರ್ಪ್ರೈಸಿಂಗ್‌ ಆಗಿ ಮಗು ಆಗಮಿಸಿದ್ದು ಇಬ್ಬರಿಗೂ ಖುಷಿಕೊಟ್ಟಿದೆಯಂತೆ. ನಿನೋಗೆ ಹೆರಿಗೆಯಾಗುತ್ತಿದೆ ಅನ್ನೋದು ಜೋಸ್ಲಿನ್‌ಗೆ ಆರಂಭದಲ್ಲಿ ಅರ್ಥವೇ ಆಗಿರಲಿಲ್ಲ. ಮಗುವಿನ ಪಾದ ಹೊರಬರುತ್ತಿದ್ರೆ ಅದನ್ನು ನೋಡಿ ಕರುಳೇ ಹೊರಬರ್ತಿದೆ ಅಂತಾ ಇಬ್ಬರೂ ಭಾವಿಸಿದ್ದರು.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜನರು ಇವರ ಸಂಬಂಧ ನೋಡಿ ಆಡಿಕೊಳ್ತಾರಂತೆ. 18 ವರ್ಷ ವಯಸ್ಸಾಗಿದ್ದಾಗ ತಾನು ಸಲಿಂಗಿ ಅನ್ನೋದು ನಿನೊಗೆ ಗೊತ್ತಾಗಿತ್ತು. ಅದೇ ಸಮಯದಲ್ಲಿ ಜೋಸ್ಲಿನ್ ಕೂಡ ತನ್ನ ಸ್ಥಿತಿಯನ್ನು ಅರಿತಿದ್ದಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...