alex Certify ಗರ್ಭಿಣಿಯಾದ 3 ತಿಂಗಳವರೆಗೂ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯಾದ 3 ತಿಂಗಳವರೆಗೂ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ

ಮಹಿಳೆಯರು ಗರ್ಭಿಣಿಯಾದಾಗ ತಾವು ಸೇವಿಸುವ ಆಹಾರಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ 3 ತಿಂಗಳು ತುಂಬುವ ತನಕ ತಿನ್ನುವ ಒಂದೊಂದು ಆಹಾರವನ್ನು ಬಹಳ ಎಚ್ಚರಿಕೆಯಿಂದ ಸೇವಿಸಬೇಕು. ಇಲ್ಲವಾದರೆ ಗರ್ಭಪಾತವಾಗುವ ಸಂಭವವಿರುತ್ತದೆ. ಹಾಗಾಗಿ ಗರ್ಭಿಣಿಯರು ಅಪ್ಪಿತಪ್ಪಿಯೂ 3 ತಿಂಗಳು ಆಗುವ ತನಕ ಈ ಆಹಾರವನ್ನು ಸೆವಿಸಬೇಡಿ.

*ಗರ್ಭಿಣಿಯರು ಮಾಂಸ ಸೇವಿಸದಿರುವುದೇ ಉತ್ತಮ. ಒಂದು ವೇಳೆ ಸೇವಿಸುವುದಾದರೂ ಚೆನ್ನಾಗಿ ಬೇಯಿಸಿ, ಇಲ್ಲವಾದರೆ ಅದರಲ್ಲಿರುವ ಬ್ಯಾಕ್ಟೀರಿಯಾ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

*ಗರ್ಭಿಣಿಯರು ಸಮುದ್ರ ಆಹಾರವನ್ನು ಹೆಚ್ಚಾಗಿ ಸೇವಿಸಬೇಡಿ. ಯಾಕೆಂದರೆ ಇದರಿಂದ ಕೈಕಾಲು ಊದಿಕೊಳ್ಳುವುದು, ವಾಂತಿ, ಅತಿಸಾರ, ದದ್ದುಗಳ ಸಮಸ್ಯೆ ಕಾಡಬಹುದು.

*ಗರ್ಭಾವಸ್ಥೆಯಲ್ಲಿ ಹಸಿ ಮೊಟ್ಟೆಯನ್ನು ಸೇವಿಸಬೇಡಿ. ಇದರಲ್ಲಿರುವ ವೈರಸ್ ಮಗುವಿಗೆ ನೇರವಾಗಿ ಅಪಾಯ ಮಾಡಬಹುದು. ಹಾಗೇ ಮೊಟ್ಟೆಯಿಂದ ಅತಿಸಾರ, ವಾಂತಿ ಸಮಸ್ಯೆ ಕಾಡಬಹುದು.

*ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದು ಇದು ಮಗುವಿನ ಬೆಳವಣೆಗೆಗೆ ತುಂಬಾ ಸಹಕಾರಿ. ಆದರೆ ಹಸಿ ಹಾಲನ್ನು ಸೇವಿಸಿದರೆ ಅದರಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು ತಾಯಿ ಮತ್ತು ಮಗುವಿಗೆ ಹಾನಿಯನ್ನುಂಟುಮಾಡಬಹುದು.

*ಪಪ್ಪಾಯ ಮತ್ತು ಅನಾನಸ್ ಹಣ್ಣನ್ನು ಗರ್ಭಿಣಿ ಸೇವಿಸಬಾರದು. ಇದರಿಂದ ಗರ್ಭಕೋಶ ಸಂಕೋಚನಗೊಂಡು ಗರ್ಭಪಾತವಾಗುವ ಸಂಭವವಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...