alex Certify ಗರ್ಭಧಾರಣೆಗೆ ಸೂಕ್ತ ಸಮಯ ಯಾವುದು ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಧಾರಣೆಗೆ ಸೂಕ್ತ ಸಮಯ ಯಾವುದು ….?

ಗರ್ಭದಾರಣೆಗೆ ಸರಿಯಾದ ಸಮಯ ಯಾವುದು ಎಂದು ಬಹಳಷ್ಟು ಜನರಿಗೆ ಸಂದೇಹ ವಿರುತ್ತದೆ. ಮಹಿಳೆಯ ವಯಸ್ಸು ಗರ್ಭಿಣಿಯಾದಾಗ ಮೂವತ್ತರ ಒಳಗಿದ್ದರೆ ಎಲ್ಲವೂ ಸುಸೂತ್ರವಾಗಿ ನಡೆದು ಹೋಗುತ್ತದೆ. ವಯಸ್ಸು ಹೆಚ್ಚಾದಷ್ಟು ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ. 35 ವಯಸ್ಸಿನ ನಂತರವಾದರೆ ಹುಟ್ಟುವ ಮಕ್ಕಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರಬಹುದು ಅಥವಾ ಗರ್ಭಪಾತವು ಆಗಬಹುದು.

ವಯಸ್ಸು ಹೆಚ್ಚಾಗುತ್ತಿದ್ದಂತೆ ಸ್ತ್ರೀಯರಲ್ಲಿ ಅಂಡಾಣು ಆರೋಗ್ಯಕರವಾಗಿ ಸರಿಯಾಗಿ ಬಿಡುಗಡೆಯಾಗುವುದಿಲ್ಲ. ಅಂಡಾಣುವಿನ ವಿಭಜನೆ ಕೂಡ ಸರಿಯಾಗಿ ನಡೆಯುವುದಿಲ್ಲ. ಹಾಗಾಗಿ ಕ್ರೋಮೋಸೋಮುಗಳ ಸಂಖ್ಯೆಯಲ್ಲಿ ವಿಭಜನೆ ಸರಿಯಾಗಿರುವುದಿಲ್ಲ. ಇದರಿಂದ ಹುಟ್ಟುವ ಮಗುವಿಗೆ ಡೌನ್ ಸಿಂಡ್ರೋಮ್ ಬರಬಹುದು. ಹಾಗಾಗಿ 35ರ ನಂತರ ಗರ್ಭಿಣಿಯಾದರೆ ಡಾಕ್ಟರ್ ಬಳಿ ಎಲ್ಲಾ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಿಕೊಳ್ಳುತ್ತಿರಬೇಕು.

ಮಹಿಳೆಯರಲ್ಲಿ 30 ವರ್ಷ ದಾಟಿದ ಮೇಲೆ ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಬರುವ ಅವಕಾಶಗಳು ಹೆಚ್ಚಿರುತ್ತವೆ. ಆದ್ದರಿಂದ ಇದು ಗರ್ಭಧಾರಣೆಯ ಮೇಲೆ ತನ್ನ ಪ್ರಭಾವವನ್ನು ತೋರಿಸಬಹುದು. ವಯಸ್ಸಾದ ಮಹಿಳೆಯರಿಗೆ ಹುಟ್ಟುವ ಮಗು ಕಡಿಮೆ ತೂಕದೊಂದಿಗೆ ಹುಟ್ಟುವ ಸಂಭವವಿರುತ್ತದೆ. ಇನ್ನು ವಯಸ್ಸು 35 ದಾಟಿದರೆ ಸಹಜವಾಗಿ ಹೆರಿಗೆಯಾಗುವ ಅವಕಾಶವೂ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...