alex Certify ಗರ್ಭದಲ್ಲಿಯೇ ಆಗುತ್ತೆ ʼಮಕ್ಕಳʼ ಭಾವನೆಗಳ ಅಭಿವೃದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭದಲ್ಲಿಯೇ ಆಗುತ್ತೆ ʼಮಕ್ಕಳʼ ಭಾವನೆಗಳ ಅಭಿವೃದ್ಧಿ

ಗರ್ಭಾವಸ್ಥೆಯಲ್ಲಿ ಹಾಗೂ ಒಂದು ವರ್ಷದವರೆಗೆ ಕುಟುಂಬದ ವಾತಾವರಣ ಮಗುವಿನ ಭಾವನಾತ್ಮಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಸಂಶೋಧನೆ ಈ ವಿಷಯವನ್ನು ದೃಢಪಡಿಸಿದೆ. ಸಂಶೋಧನೆ ಪ್ರಕಾರ ಮಗುವಿನ ಭಾವನಾತ್ಮಕ ವಿಕಾಸ ತಾಯಿ, ಮಗುವಿನ ಸಂಬಂಧದ ಜೊತೆಗೆ ಕುಟುಂಬದ ಪ್ರಾಮುಖ್ಯತೆಯನ್ನು ಬಹಿರಂಗಪಡಿಸಿದೆ.

ಫಿನ್ಲ್ಯಾಂಡ್ ವಿಶ್ವವಿದ್ಯಾನಿಲಯವೊಂದು ಈ ಬಗ್ಗೆ ಸಂಶೋಧನೆ ನಡೆಸಿತ್ತು. ಬೇರೆ ಬೇರೆ ಕುಟುಂಬದ 10 ವರ್ಷದ ಸುಮಾರು 79 ಮಕ್ಕಳ ಮೇಲೆ ಸಂಶೋಧನೆ ನಡೆಸಲಾಗಿದ್ದು. ಮಕ್ಕಳಿಗೆ ದುಃಖದ ಹಾಗೂ ಸಂತೋಷದ ಫೋಟೋಗಳನ್ನು ತೋರಿಸಲಾಗಿತ್ತು. ಮಕ್ಕಳ ಪ್ರತಿಕ್ರಿಯೆಯನ್ನು ಭಾವನಾತ್ಮಕವಾಗಿ ಅರ್ಥೈಸಲಾಯಿತು.

ಅಧ್ಯಯನದಲ್ಲಿ ಮಕ್ಕಳು ಕುಟುಂಬದ ವಾತಾವರಣಕ್ಕೆ ತಕ್ಕಂತೆ ತಮ್ಮ ಭಾವನಾತ್ಮಕ ತಂತ್ರಗಳನ್ನು ಅಭಿವೃದ್ಧಿಪಡಿಸಿಕೊಳ್ತಾರೆ ಎಂಬ ಅಂಶ ಹೊರಬಿದ್ದಿದೆ. ತಂದೆ, ತಾಯಿ ಸಮಸ್ಯೆಗಳನ್ನು ಹೇಗೆ ಬಿಡಿಸುತ್ತಾರೆಯೋ ಹಾಗೆಯೇ ಮಕ್ಕಳು ಕೂಡ ತೊಡಕುಗಳನ್ನು ಬಿಡಿಸಲು ಕಲಿಯುತ್ತಾರೆ. ತಂದೆ, ತಾಯಿಯ ವೈವಾಹಿಕ ಸಂಬಂಧ, ಮಗು ಜನನದ ಮೊದಲ ದಿನದಿಂದ ತಂದೆಯ ಪ್ರೀತಿ ಈ ಎಲ್ಲವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...