alex Certify ಗಂಡ – ಹೆಂಡಿರ ಜಗಳದಲ್ಲಿ ಲಂಚದ ಆರೋಪ – ಪೊಲೀಸ್ ಅಧಿಕಾರಿಗಳಿಬ್ಬರ ವಿರುದ್ಧ ಎಫ್ಐಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡ – ಹೆಂಡಿರ ಜಗಳದಲ್ಲಿ ಲಂಚದ ಆರೋಪ – ಪೊಲೀಸ್ ಅಧಿಕಾರಿಗಳಿಬ್ಬರ ವಿರುದ್ಧ ಎಫ್ಐಆರ್

ಬೆಂಗಳೂರು : ಗಂಡ – ಹೆಂಡತಿ ಜಗಳದಲ್ಲಿ ಲಂಚ ಪಡೆಯಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದ್ದು, ಕೆ.ಆರ್. ಪುರ ಠಾಣೆಯ ಎಎಸ್ಐ ಶಿವಕುಮಾರ್ ಹಾಗೂ ಜಯರಾಜ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

BIG BREAKING: ರೈತ ಸಂಘಟನೆಗಳಿಂದ ಮಹತ್ವದ ನಿರ್ಧಾರ, ಪಂಜಾಬ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ

ನಗರದಲ್ಲಿ ವಾಸಿಸುತ್ತಿದ್ದ ಸಂಜು ರಾಜನ್ ಹಾಗೂ ಅವರ ಪತ್ನಿಯ ನಡುವೆ ವೈಮನಸ್ಸು ಉಂಟಾಗಿ ಜಗಳವಾಗಿತ್ತು. ಹೀಗಾಗಿ ಸಂಜು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜು ಬಂಧನಕ್ಕೊಳಗಾಗಿದ್ದರು. ಆ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದರು.

ಹೀಗಾಗಿ ಅವರು ಪ್ರತಿ ವಾರ ಠಾಣೆಗೆ ಬಂದು ಸಹಿ ಹಾಕಬೇಕಿತ್ತು. ಹೀಗೆ ಸಹಿ ಮಾಡಲು ಸಂಜು ಬಂದಾಗೊಮ್ಮೆ 500 ರೂಪಾಯಿ ಅಥವಾ ಸಾವಿರ ರೂಪಾಯಿ ವರೆಗೆ ನೀಡಬೇಕು ಎಂದು ಹೇಳಿದ್ದರು ಎಂಬ ಆರೋಪ ಸದ್ಯ ಪೊಲೀಸರು ಮೇಲಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಜಯರಾಜ್ ಎಂಬುವವರು ಸದ್ಯ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...