alex Certify ಖಿನ್ನತೆಗೆ ಬಲಿಯಾಗ್ತಿದ್ದಾರೆ 5 ವರ್ಷದ ಪುಟ್ಟ ಮಕ್ಕಳು, WHO ವರದಿಯಲ್ಲಿ ಬಹಿರಂಗವಾಯ್ತು ಶಾಕಿಂಗ್‌ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಿನ್ನತೆಗೆ ಬಲಿಯಾಗ್ತಿದ್ದಾರೆ 5 ವರ್ಷದ ಪುಟ್ಟ ಮಕ್ಕಳು, WHO ವರದಿಯಲ್ಲಿ ಬಹಿರಂಗವಾಯ್ತು ಶಾಕಿಂಗ್‌ ಸಂಗತಿ….!

ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈ ವರದಿಯ ಪ್ರಕಾರ ಪ್ರಪಂಚದಾದ್ಯಂತ ಸುಮಾರು ಶೇ.14ರಷ್ಟು ಹದಿಹರೆಯದವರು ಹಲವು  ರೀತಿಯ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಇನ್ನೂ ಶಾಕಿಂಗ್‌ ಸಂಗತಿ ಎಂದರೆ ಜಗತ್ತಿನಲ್ಲಿ 5 ರಿಂದ 9 ವರ್ಷ ವಯಸ್ಸಿನ ಶೇ.8ರಷ್ಟು ಮಕ್ಕಳು ಕೂಡ ಖಿನ್ನತೆಯಿಂದ ಬಳಲುತ್ತಿದ್ದಾರೆ.

ಈ ಮಕ್ಕಳ ಮಾನಸಿಕ ಖಿನ್ನತೆಗೆ ಅವರ ದೈಹಿಕ ನ್ಯೂನತೆ ಕಾರಣ ಎಂದು ಹೇಳಲಾಗುತ್ತದೆ. 5 ವರ್ಷದೊಳಗಿನ ಪ್ರತಿ 50 ಮಕ್ಕಳಲ್ಲಿ ಒಬ್ಬರು  ಕೆಲವು ಬೆಳವಣಿಗೆಯ ಅಸಾಮರ್ಥ್ಯದಿಂದಾಗಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಶ್ರೀಮಂತ ರಾಷ್ಟ್ರಗಳಲ್ಲಿ 15 ಪ್ರತಿಶತದಷ್ಟು ಮತ್ತು ಬಡ ದೇಶಗಳಲ್ಲಿ ಶೇ.11.6ರಷ್ಟು ಜನರು ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಾರೆ.

970 ಮಿಲಿಯನ್ ಜನರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. 2019ರ ಅಂಕಿ ಅಂಶಗಳ ಪ್ರಕಾರ, 301 ಮಿಲಿಯನ್ ಜನರು ಆತಂಕಕ್ಕೆ ಸಂಬಂಧಪಟ್ಟ ಅಸ್ವಸ್ಥತೆಯನ್ನು ಹೊಂದಿದ್ದರು. 200 ಮಿಲಿಯನ್ ಜನರು ಖಿನ್ನತೆಯನ್ನು ಅನುಭವಿಸುತ್ತಿದ್ದರು. 2020ರಲ್ಲಿ ಕೊರೊನಾ ವೈರಸ್‌ನಿಂದಾಗಿ ಡಿಪ್ರೆಶನ್‌ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಆಗ ಸುಮಾರು 246 ಮಿಲಿಯನ್ ಜನರು ಖಿನ್ನತೆಯನ್ನು ಹೊಂದಿದ್ದರು. ಆತಂಕಕ್ಕೆ ಬಲಿಯಾದವರ 374 ಮಿಲಿಯನ್‌ಗೆ ಏರಿತು. ಒಂದೇ ವರ್ಷದಲ್ಲಿ ಖಿನ್ನತೆಯ ಪ್ರಕರಣಗಳು ಶೇ.28 ರಷ್ಟು ಹೆಚ್ಚಾಗಿರುವುದು ಆತಂಕಕಾಗಿ ಸಂಗತಿ.

ಮಹಿಳೆಯರೇ ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ…

ಶೇ.52ರಷ್ಟು ಮಹಿಳೆಯರು ಮತ್ತು ಶೇ.45ರಷ್ಟು ಪುರುಷರು ಕೆಲವೊಂದು ಬಗೆಯ ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಿದ್ದಾರೆ. 29 ಪ್ರತಿಶತದಷ್ಟು ಜನರು ಖಿನ್ನತೆಗೆ ಬಲಿಯಾದ್ರೆ, ಶೇ. 11 ರಷ್ಟು ಮಂದಿ ಕೆಲವು ರೀತಿಯ ದೈಹಿಕ ಅಸಾಮರ್ಥ್ಯವನ್ನು ಹೊಂದಿದ್ದಾರೆ, ಈ ಕಾರಣಕ್ಕೆ ಅವರು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಾರೆ.

ಆತ್ಮಹತ್ಯೆ ಪ್ರಕರಣಗಳಲ್ಲೂ ಹೆಚ್ಚಳ…

ಅಂಕಿ ಅಂಶಗಳ ಪ್ರಕಾರ ಪ್ರತಿ 100 ಸಾವುಗಳಲ್ಲಿ ಒಂದು ಸಾವು ಸಂಬವಿಸುತ್ತಿರುವುದು ಆತ್ಮಹತ್ಯೆಯಿಂದ. 2019 ರಲ್ಲಿ  7,03,000 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿ 1 ಲಕ್ಷ ಜನರಲ್ಲಿ 9 ಮಂದಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚು. ಮಾನಸಿಕ ಅಸ್ವಸ್ಥತೆಯಿಂದ ನಮ್ಮ ಆಯಸ್ಸು ಕೂಡ ಕುಂಠಿತವಾಗುತ್ತದೆ.

ಪ್ರಪಂಚದಾದ್ಯಂತ ಹರಡಿರುವ ಡಿಪ್ರೆಶನ್‌ಗೆ ಕಾರಣಗಳನ್ನ ಹುಡುಕುತ್ತ ಹೋದರೆ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳನ್ನು ಬೆದರಿಸುವಂತಹ ಘಟನೆಗಳೇ ಮೂಲ ಅನ್ನೋದು ಬೆಳಕಿಗೆ ಬರುತ್ತದೆ. ಹಠಾತ್ ಹವಾಮಾನ ಬದಲಾವಣೆ, ಸಾಮಾಜಿಕ ತಾರತಮ್ಯವೂ ಕೂಡ ಕಾರಣ. ವರದಿಗಳ ಪ್ರಕಾರ, ಸೈಕೋಸಿಸ್‌ನಿಂದ ಬಳಲುತ್ತಿರುವ ಶೇ.71ರಷ್ಟು ಜನರು ಸರಿಯಾದ ಚಿಕಿತ್ಸೆಯನ್ನು ಪಡೆಯುವುದಿಲ್ಲ. ಚಿಕಿತ್ಸೆ ಪಡೆಯುವವರಲ್ಲಿ ಶೇ.70ರಷ್ಟು ಮಂದಿ ಶ್ರೀಮಂತ ದೇಶಗಳಲ್ಲಿ ವಾಸಿಸುವ ಜನರು. ಬಡ ದೇಶಗಳಲ್ಲಿ ವಾಸಿಸುವ ಮಾನಸಿಕ ಅಸ್ವಸ್ಥರಲ್ಲಿ ಕೇವಲ ಶೇ.12ರಷ್ಟು ಜನರು ಮಾತ್ರ ಚಿಕಿತ್ಸೆ ಪಡೆಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...