alex Certify ಪ್ಯಾಂಟ್ ಜಿಪ್ ತೆಗೆದು ಕ್ಯಾಬ್ ಚಾಲಕನ ಅಸಭ್ಯ ವರ್ತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾಂಟ್ ಜಿಪ್ ತೆಗೆದು ಕ್ಯಾಬ್ ಚಾಲಕನ ಅಸಭ್ಯ ವರ್ತನೆ

ಬೆಂಗಳೂರು: ಕ್ಯಾಬ್ ಗೆ ಡಿಕ್ಕಿ ಹೊಡೆದ ಮತ್ತೊಂದು ಕಾರ್ ಚಾಲಕನೊಂದಿಗೆ ಕ್ಯಾಬ್ ಚಾಲಕ ವಾಗ್ವಾದ ನಡೆಸಿ ಪ್ಯಾಂಟ್ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ.

ಕೊಡಿಗೇಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆಬ್ರವರಿ 9ರಂದು ತಡರಾತ್ರಿ 1 ಗಂಟೆಗೆ ಪ್ರಕರಣ ನಡೆದಿದೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಮುಂದೆ ಚಲಿಸುತ್ತಿದ್ದ ಕ್ಯಾಬ್ ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದಿದ್ದು, ಇದೇ ವಿಚಾರಕ್ಕೆ ಎರಡು ಕಾರ್ ಗಳ ಚಾಲಕರ ನಡುವೆ ಜಗಳವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಡಿಕ್ಕಿ ಹೊಡೆದ ಕಾರ್ ನ ಚಾಲಕನ ಮುಂಭಾಗ ಬಂದು ಕ್ಯಾಬ್ ಚಾಲಕ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ.

ಚಾಲಕ ತನ್ನ ಕಾರ್ ನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಾಕಿ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಆರೋಪಿತ ಕ್ಯಾಬ್ ಚಾಲಕನನ್ನು ಠಾಣೆಗೆ ಕರೆಸಿಕೊಂಡು ಪೊಲೀಸರು ವಿಚಾರಿಸಿದ್ದಾರೆ. ನೊಂದ ಚಾಲಕನಿಂದ ದೂರು ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...