alex Certify ಕ್ಯಾನ್ಸರ್‌ ಗೆದ್ದ ನಟಿಗೆ ಕಾಡುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ ಗೆದ್ದ ನಟಿಗೆ ಕಾಡುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ….!

ದಕ್ಷಿಣದ ನಟಿ ಮಮತಾ ಮೋಹನ್ ದಾಸ್ ಅಪಾಯಕಾರಿ ಕಾಯಿಲೆಯೊಂದರಿಂದ ಬಳಲುತ್ತಿದ್ದಾರೆ. ಆಕೆಗೆ ಆಟೋ ಇಮ್ಯೂನ್ ಡಿಸಾರ್ಡರ್ ವಿಟಿಲಿಗೋ ಇದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಮಮತಾ ಈ ಮಾಹಿತಿಯನ್ನು ನೀಡಿದ್ದಾರೆ. ಹಲವು ಸೆಲ್ಫಿಗಳನ್ನೂ ಪೋಸ್ಟ್ ಮಾಡಿದ್ದಾರೆ. ಅನಾರೋಗ್ಯದಿಂದ ತಾವು ಅನುಭವಿಸುತ್ತಿರುವ ನೋವನ್ನು ಮಮತಾ ಬಿಚ್ಚಿಟ್ಟಿದ್ದಾರೆ. ಮಮತಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದುಕೊಂಡು ಕ್ಯಾನ್ಸರ್‌ ಗೆದ್ದ ಬಳಿಕ ವಿಟಿಲಿಗೋ ಎಂಬ ಕಾಯಿಲೆ ಅವರನ್ನು ಆವರಿಸಿಕೊಂಡಿದೆ.

38 ವರ್ಷದ ಮಮತಾ ಮೋಹನ್ ದಾಸ್, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಮಮತಾಗೆ Hodgkin’s Lymphoma ಕ್ಯಾನ್ಸರ್ ಇರುವುದು ಪತ್ತೆಯಾಯಿತು. 2013 ರಲ್ಲಿ ಇದು ಮತ್ತೆ ವಕ್ಕರಿಸಿತ್ತು. ಲಾಸ್ ಏಂಜಲೀಸ್‌ನಲ್ಲಿ ಚಿಕಿತ್ಸೆ ಪಡೆದ ಮಮತಾ ಕ್ಯಾನ್ಸರ್‌ ಗೆದ್ದಿದ್ದಾರೆ. ಆದ್ರೆ ಆಕೆಯ ಕಷ್ಟಗಳು ಮುಗಿಯುತ್ತಿಲ್ಲ. ಈಗ 2023ರ ಆರಂಭದಲ್ಲಿ ವಿಟಿಲಿಗೋ ಎಂಬ ಕಾಯಿಲೆ ಇರುವುದು ಪತ್ತೆಯಾಗಿದೆ. ವಿಟಿಲಿಗೋ ಎಂದರೇನು? ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, ವಿಟಿಲಿಗೋ ಒಂದು ಅಸ್ವಸ್ಥತೆಯಾಗಿದ್ದು ಅದು ಚರ್ಮದ ಬಣ್ಣವನ್ನು ಬದಲಾಯಿಸುತ್ತದೆ.

ಈ ಚರ್ಮ ರೋಗವು ಯಾರಿಗಾದರೂ ಬಾಧಿಸಬಹುದು. ಚರ್ಮದ ಟೋನ್ ಗಾಢವಾಗಿರುವವರಲ್ಲಿ ಈ ಕಾಯಿಲೆ ಕಾಣಿಸಿಕೊಂಡಾಗ ಬಿಳಿ ಚುಕ್ಕೆಗಳು ಮೂಡುತ್ತವೆ. ಕೈ, ಮೊಣಕಾಲು, ಪಾದ, ಬೆನ್ನು ಮತ್ತು ಮುಖದ ಚರ್ಮವು ಸಂಪೂರ್ಣ ಬೆಳ್ಳಗಾಗಿಬಿಡುತ್ತದೆ. ಬಿಳಿ ಚುಕ್ಕೆಗಳು ಏಕೆ ಸಂಭವಿಸುತ್ತವೆ ? ವಿಟಿಲಿಗೋ ಒಂದು ಸ್ವಯಂ ನಿರೋಧಕ ಕಾಯಿಲೆ. ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೆಲನೋಸೈಟ್‌ಗಳನ್ನು ಆಕ್ರಮಿಸುತ್ತದೆ ಮತ್ತು ಕೊಲ್ಲುತ್ತದೆ.

ಸನ್‌ಬರ್ನ್, ಮಾನಸಿಕ ಯಾತನೆ ಇವೆಲ್ಲ ಸಾಮಾನ್ಯ. ಕೆಮಿಕಲ್‌ಗಳು ವಿಟಿಲಿಗೋ ಉಲ್ಬಣವಾಗಲು ಕಾರಣವಾಗಬಹುದು. ಇದಲ್ಲದೆ ಕುಟುಂಬದಲ್ಲಿ ಈ ಕಾಯಿಲೆಯ ಇತಿಹಾಸವಿದ್ದರೆ, ಅದು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. Vitiligoಗೆ ಚಿಕಿತ್ಸೆ ಏನು? ಪ್ರಪಂಚದಾದ್ಯಂತದ ವಿಜ್ಞಾನಿಗಳು ಇನ್ನೂ ವಿಟಿಲಿಗೋ ರೋಗಕ್ಕೆ ಪರಿಹಾರವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಬಿಳಿ ಚರ್ಮದ ತೇಪೆಗಳನ್ನು ಕಡಿಮೆ ಮಾಡಲು ಹಲವಾರು ಚಿಕಿತ್ಸಾ ಆಯ್ಕೆಗಳು ಲಭ್ಯವಿದೆ. ಮೇಕ್ಅಪ್ ಮತ್ತು ಸ್ವಯಂ-ಟ್ಯಾನರ್‌ಗಳ ಮೂಲಕ ಬಿಳಿ ಚುಕ್ಕೆಗಳನ್ನು ಮರೆಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...