alex Certify ಕೋವಿಡ್ 19 ಲಸಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತ: ಟ್ವೀಟ್​ ಮೂಲಕ ಕೇಂದ್ರ ಆರೋಗ್ಯ ಸಚಿವರಿಂದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ 19 ಲಸಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತ: ಟ್ವೀಟ್​ ಮೂಲಕ ಕೇಂದ್ರ ಆರೋಗ್ಯ ಸಚಿವರಿಂದ ಮಾಹಿತಿ

ದೇಶದಲ್ಲಿ ಅರ್ಹ ವಯಸ್ಕ ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ಜನರು ಕೋವಿಡ್​ 19 ವಿರುದ್ಧ ಲಸಿಕೆಯನ್ನು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್​ ಮಾಂಡವಿಯಾ ಅಧಿಕೃತ ಮಾಹಿತಿ ನೀಡಿದ್ದಾರೆ. ಭಾರತವು ಈ ಐತಿಹಾಸಿಕ ಮೈಲುಗಲ್ಲನ್ನು ಸಾಧಿಸಿರುವ ಬಗ್ಗೆ ಮನ್ಸುಕ್​ ಮಾಂಡವಿಯಾ ಟ್ವಿಟರ್​ ಮೂಲಕ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಉಚಿತ ಲಸಿಕೆಗಳು. ಭಾರತದಲ್ಲಿ ಅರ್ಹ ವಯಸ್ಕ ಜನಸಂಖ್ಯೆಯ ಶೇಕಡಾ 80ರಷ್ಟು ಜನರು ಕೋವಿಡ್​ 19 ಲಸಿಕೆಯ ಎರಡೂ ಡೋಸ್​ಗಳನ್ನು ಸ್ವೀಕರಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಸಬ್​​ ಕಾ ಪ್ರಯಾಸ್​​ ಎಂಬ ಧ್ಯೇಯವಾಕ್ಯದೊಂದಿಗೆ ದೇಶವು ಕೋವಿಡ್​​ 19 ಲಸಿಕೆಯ 100 ಪ್ರತಿಶತ ಸಾಧನೆಯ ಕಡೆಗೆ ವೇಗವಾಗಿ ಚಲಿಸುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಓಮಿಕ್ರಾನ್​ ರೂಪಾಂತರದಿಂದಾಗಿ ದೇಶದಲ್ಲಿ ಉಂಟಾಗಿದ್ದ ಕೋವಿಡ್​ ಮೂರನೇ ಅಲೆಯು ಇದೀಗ ಕ್ಷೀಣಿಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿರುವುದು ನಿಜಕ್ಕೂ ದೊಡ್ಡ ಮುನ್ನಡೆಯೇ ಆಗಿದೆ.

ಕೋವಿಡ್​ 19 ನಿರ್ಬಂಧಗಳನ್ನು ತೆಗೆದು ಹಾಕುವಂತೆ ಈಗಾಗಲೇ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ ಎನ್ನಲಾಗಿದೆ.

— Dr Mansukh Mandaviya (@mansukhmandviya) February 18, 2022

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...