alex Certify ಕೋವಿಡ್​ ಸಾಂಕ್ರಾಮಿಕ ಕುರಿತಂತೆ ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸಾಂಕ್ರಾಮಿಕ ಕುರಿತಂತೆ ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಯಲು

ಇಂಪೀರಿಯಲ್​ ಕಾಲೇಜು ಲಂಡನ್​ ಸಂಶೋಧಕರ ನೇತೃತ್ವದ ತಂಡವು ನಡೆಸಿದ ಹೊಸ ಅಧ್ಯಯನದ ಪ್ರಕಾರ ಕೊರೊನಾ ವೈರಸ್​ ಸಂಪರ್ಕಕ್ಕೆ ಬಂದ 2 ದಿನಗಳ ನಂತರ ಕೋವಿಡ್​ 19 ಸೋಂಕಿನ ರೋಗ ಲಕ್ಷಣಗಳು ಬಹಳ ವೇಗವಾಗಿ ಬೆಳೆಯಲು ಆರಂಭವಾಗುತ್ತದೆ. ಅಂದರೆ ಈ ಹಿಂದಿನ ಅಧ್ಯಯನಗಳು ಹೇಳಿದ್ದಕ್ಕಿಂತ ಅತ್ಯಂತ ಮುಂಚಿತವಾಗಿ ಅಂದರೆ ಕೋವಿಡ್​ ಸೋಂಕಿತರ ಸಂಪರ್ಕಕ್ಕೆ ಬಂದ ಕೇವಲ 48 ಗಂಟೆಗಳ ಅವಧಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಈ ಅಧ್ಯಯನವು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್​ ಸೋಂಕಿತರ ಸಂಪರ್ಕಕ್ಕೆ ಬಂದ ಬಳಿಕ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಐದರಿಂದ ಆರು ದಿನಗಳ ಕಾಲವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿತ್ತು.

ಕೋವಿಡ್​ ಸೋಂಕು ಮೊದಲು ಗಂಟಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ಒಳಗಾದ ಐದು ದಿನಗಳ ಬಳಿಕ ಲಕ್ಷಣಗಳು ಮಿತಿಮೀರುತ್ತದೆ ಎಂದು ಈ ಹೊಸ ಅಧ್ಯಯನವು ಹೇಳಿದೆ. ವೈರಸ್​ ಮೂಗಿಗಿಂತ ಹೆಚ್ಚಾಗಿ ಗಂಟಲಿನಲ್ಲಿ ಇರುತ್ತದೆ. ಇದರಿಂದಾಗಿ ಬಾಯಿಯಿಂದ ವೈರಸ್​ಗಳು ಹೊರಹೋಗುವ ಅಪಾಯಗಳು ಹೆಚ್ಚಿರುತ್ತದೆ ಎಂದು ಈ ಅಧ್ಯಯನವು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...