alex Certify ಕೆಲವೊಮ್ಮೆ ಇಂಟಲಿಜನ್ಸ್ ರಿಪೋರ್ಟ್ ಸುಳ್ಳಾಗುತ್ತೆ; ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ; ಸಚಿವ ನಿರಾಣಿ ವಿಶ್ವಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವೊಮ್ಮೆ ಇಂಟಲಿಜನ್ಸ್ ರಿಪೋರ್ಟ್ ಸುಳ್ಳಾಗುತ್ತೆ; ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ; ಸಚಿವ ನಿರಾಣಿ ವಿಶ್ವಾಸ

ಹಾವೇರಿ: ಹಾನಗಲ್ ನಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಮುರುಗೇಶ್ ನಿರಾಣಿ, ನೂರಕ್ಕೆ ನೂರರಷ್ಟು ಹಾನಗಲ್ ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ʼಸ್ವಿಗ್ಗಿʼ ಮಹಿಳಾ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್..!

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಿರಾಣಿ, ಬಹಷ್ಟು ಸಲ ಇಂಟಲಿಜನ್ಸ್ ರಿಪೋರ್ಟ್ ಸುಳ್ಳಾಗುತ್ತೆ. ಈ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಉಪಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ ಎಂಬ ವಿಶ್ವಾಸವಿದೆ. ಯಾವುದೇ ವರದಿ ಅಥವಾ ವಿಪಕ್ಷ ನಾಯಕರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ನಮ್ಮ ಅನುಭವದ ಲೆಕ್ಕಾಚಾರದ ಮೇಲೆ ಹೇಳುವುದಾದರೂ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಲಿದ್ದಾರೆ ಎಂದು ಹೇಳಿದರು.

ಕೂಗಾಡಿದ ಪತ್ನಿಯನ್ನು ಕೊಂದು ಸಮುದ್ರಕ್ಕೆಸೆದ ಪತಿ….!

ಉಪಚುನಾವಣೆಯಲ್ಲಿ ಹಾನಗಲ್ ನಲ್ಲಿ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಬಿಜೆಪಿ ಸೋಲಲಿದೆ ಎಂಬುದು ಸ್ವತಃ ಸಿಎಂ ಬೊಮ್ಮಾಯಿಯವರಿಗೂ ಗೊತ್ತು, ನಿರಾಣಿಯವರಿಗೂ ಗೊತ್ತು ಎಂದು ಹೇಳಿದ್ದ ಸಿದ್ದರಾಮಯ್ಯ, ಇದೇ ಕಾರಣಕ್ಕೆ ಹಣ ಹಂಚಿಕೆ ಮಾಡಿಯಾದರೂ ಗೆಲುವು ಸಾಧಿಸಬೇಕು ಎಂದು ಮತದಾರರಿಗೆ ಹಣದ ಆಮಿಷವೊಡ್ದುತ್ತಿದ್ದಾರೆ ಎಂದು ಆರೋಪಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...