alex Certify ಕೂದಲಿನ ʼಸೌಂದರ್ಯʼ ಹಾಗೂ ಆರೈಕೆಗೆ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನ ʼಸೌಂದರ್ಯʼ ಹಾಗೂ ಆರೈಕೆಗೆ ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವ ಸಮಸ್ಯೆ ಕಂಡು ಬರುವುದು ಅಧಿಕ. ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು.

ಚಳಿಗಾಲಕ್ಕೆ ಕೂದಲಿನ ಆರೈಕೆ ಹೀಗಿರಲಿ:

* ತಲೆ ಹೊಟ್ಟು ನಿವಾರಣೆಗೆ, 1 ಚಮಚ ಆಲಿವ್‌ ಆಯಿಲ್‌, 1 ಚಮಚ ಕೊಬ್ಬರಿ ಎಣ್ಣೆ ಎರಡನ್ನೂ ಮಿಕ್ಸ್‌ ಮಾಡಿ. ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ತಲೆ ಬುಡಕ್ಕೆ ಚೆನ್ನಾಗಿ ಹಚ್ಚಿ. 20-30 ನಿಮಿಷ ಬಿಟ್ಟು ಶ್ಯಾಂಪೂ ಮತ್ತು ಕಂಡೀಷನರ್‌ ಬಳಸಿ ಕೂದಲನ್ನು ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ.

* ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರಿನಿಂದ ಕೂದಲು ತೊಳೆಯುವ ಬದಲು ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ, ರಕ್ತ ಸಂಚಾರ ಚೆನ್ನಾಗಿ ಆಗುವುದು. ಹಾಗೇ ಕೂದಲಿಗೂ ಒಳ್ಳೆಯದು.

* ಕೂದಲು ಸೊಂಪಾಗಿ ಕಾಣಬೇಕಂದ್ರೆ ಕೂದಲಿಗೆ ಜೇನು ಹಚ್ಚಿ ಟವಲ್‌ ಸುತ್ತಿ. ಅರ್ಧ ಗಂಟೆಯ ಬಳಿಕ ಹದವಾದ ಬಿಸಿ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ. ಹೀಗೆ ಮಾಡಿದರೆ ಕೂದಲು ಸೊಂಪಾಗಿ ಕಾಣುವುದು.

* ಡ್ರೈಯರ್‌ ಬಳಸಿ ಕೂದಲು ಒಣಗಿಸುವುದಾದರೆ ಡ್ರೈಯರ್‌ ಅನ್ನು 15 ಸೆಂಟಿಮೀಟರ್‌ ದೂರ ಹಿಡಿಯಿರಿ. ಡ್ರೈಯರ್‌ ಬದಲು ಬಿಸಿಲಿನಲ್ಲಿ ಕೂದಲು ಒಣಗಿಸಿದರೆ ಇನ್ನೂ ಒಳ್ಳೆಯದು.

* ಕಂಡೀಷನರ್‌ ಹಚ್ಚಿ 1-2 ನಿಮಿಷ ಬಿಡಿ, ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ಇದರಿಂದ ಕೂದಲು ನುಣಪಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...