alex Certify ಕುಡಿದ ಅಮಲಿನಲ್ಲಿ ಕಾರು ಓಡಿಸಿ ಅಪಘಾತವೆಸಗಿದ್ದ ನಟಿ ‘ಅರೆಸ್ಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಕಾರು ಓಡಿಸಿ ಅಪಘಾತವೆಸಗಿದ್ದ ನಟಿ ‘ಅರೆಸ್ಟ್’

ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ನಟಿ ಕಾವ್ಯಾ ಥಾಪರ್​​ರನ್ನು ಪೊಲೀಸರು ಬಂಧಿಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಕಾವ್ಯಾ ತಮ್ಮ ಕಾರಿನಿಂದ ಓರ್ವ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದ ಮಾತ್ರವಲ್ಲದೇ ಆತನೊಂದಿಗೆ ಗಲಾಟೆಯಲ್ಲಿ ತೊಡಗಿದ್ದರು. ಬಳಿಕ ಪೊಲೀಸರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕಾವ್ಯಾರನ್ನು ಇಂದು ಬಂಧಿಸಿದ್ದ ಜುಹು ಪೊಲೀಸರು ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.

ಮುಂಬೈ ಮೂಲದವರಾದ ಕಾವ್ಯಾ ಥಾಪರ್​ ಹಿಂದಿ ಕಿರುಚಿತ್ರ ತತ್ಕಾಲ್​ ಮೂಲಕ ನಟನಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇದಾದ ಬಳಿಕ ಕಾವ್ಯಾ ಪತಂಜಲಿ, ಮೇಕ್​ ಮೈ ಟ್ರಿಪ್​​ ಹಾಗೂ ಕೊಹಿನೂರ್​ನಂತಹ ಜನಪ್ರಿಯ ಬ್ರ್ಯಾಂಡ್​ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕಾವ್ಯಾ ಹಿಂದಿ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಚಿತ್ರರಂಗಳಲ್ಲಿಯೂ ಕೆಲಸ ಮಾಡಿದ್ದಾರೆ. 2018ರಲ್ಲಿ ಈ ನಟಿ ಮೊದಲ ಬಾರಿಗೆ ತೆಲುಗು ಸಿನಿಮಾ ಮಾಯಾ ಪೆರೆಮಿಟೋದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ 2019ರಲ್ಲಿ ಕಾವ್ಯಾ ನಟನೆಯ ತಮಿಳು ಸಿನಿಮಾ ಮಾರ್ಕೆಟ್​ ರಾಜ ಎಂಬಿಬಿಎಸ್​ ಬಿಡುಗಡೆಯಾಗಿದೆ. ಮೂಲಗಳ ಪ್ರಕಾರ ಕಾವ್ಯಾ ಪ್ರಸ್ತುತ ವಿಜಯ್​ ಆಂಟೋನಿ ಅವರ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...