alex Certify ಕುಡಿದ ಅಮಲಿನಲ್ಲಿ ಇಂಥಾ ಯಡವಟ್ಟು ಮಾಡಿಕೊಂಡಿದ್ದಾಳೆ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಇಂಥಾ ಯಡವಟ್ಟು ಮಾಡಿಕೊಂಡಿದ್ದಾಳೆ ಮಹಿಳೆ..!

ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಮಕ್ಕಳನ್ನೂ ಕೂರಿಸಿಕೊಂಡು ಕಾರು ಚಲಾಯಿಸಿದ್ದಾಳೆ. ನಂತರ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾಳೆ. ಅಪಘಾತದಲ್ಲಿ ಗಾಯಗೊಂಡಿರೋ ವ್ಯಕ್ತಿ ಈಗ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ಇಂಗ್ಲೆಂಡಿನ ವಾಲ್ಸಾಲ್‌ ಎಂಬಲ್ಲಿ ಈ ಘಟನೆ ನಡೆದಿದೆ.

ಯುವಕನಿಗೆ ಡಿಕ್ಕಿ ಹೊಡೆಸಿದ ಬಳಿಕ ಆರೋಪಿ ಮಹಿಳೆ ತನ್ನ ಕಾರನ್ನು ಸೂಪರ್ ಮಾರ್ಕೆಟ್ ಬಳಿ ಬಿಟ್ಟು ಓಡಿ ಹೋಗಿದ್ಲು. ಮಹಿಳೆಯೊಬ್ಬಳು ಆ ನೀಲಿ ಕಾರನ್ನು ಚಾಲನೆ ಮಾಡುತ್ತಿದ್ಲು ಅಂತಾ ಪ್ರತ್ಯಕ್ಷದರ್ಶಿಗಳೇ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿ ಮಕ್ಕಳು ಹಾಗೂ ಒಂದು ನಾಯಿ ಕೂಡ ಇದ್ದಿದ್ದಾಗಿ ತಿಳಿಸಿದ್ದಾರೆ. ಇದೇ ಮಾಹಿತಿ ಆಧಾರದ ಮೇಲೆ ಶೋಧ ಆರಂಭಿಸಿದ ಪೊಲೀಸರು 35 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.

ಕ್ಲಬ್ ಆಗಿ ಮಾರ್ಪಾಡಾಯಿತು ಓಮಿನಿ ಕಾರು…! ಇದನ್ನು ನೋಡಿ ಬೆರಗಾದ್ರು ನೆಟ್ಟಿಗರು

ಡಿಕ್ಕಿಯ ರಭಸಕ್ಕೆ ಕಾರಿನ ವಿಂಡ್ ಶೀಲ್ಡ್ ಮತ್ತು ಬಂಪರ್ ಮುರಿದು ಬಿದ್ದಿದೆ. ಮಹಿಳೆ ವಿಪರೀತ ಕುಡಿದಿದ್ಲು. ಹಾಗಾಗಿ ನಿಯಂತ್ರಣ ತಪ್ಪಿ ಯುವಕನಿಗೆ ಡಿಕ್ಕಿ ಹೊಡೆಸಿದ್ದಾಳೆ. ಗಾಯಗೊಂಡ ವ್ಯಕ್ತಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಆತನ ಸ್ಥಿತಿ ಈಗ ಗಂಭೀರವಾಗಿದೆ. ಮದ್ಯಪಾನ ಮಾಡಿ ಕಾರು ಚಲಾಯಿಸುವಂತಿಲ್ಲ ಅನ್ನೋ ಕಠಿಣ ನಿಯಮವಿದೆ. ಅದರಲ್ಲೂ ಮಹಿಳೆ ಮಕ್ಕಳನ್ನೂ ಜೊತೆಯಲ್ಲಿ ಕೂರಿಸಿಕೊಂಡು ಹೋಗಿದ್ದರಿಂದ ಆಕೆಗೆ ಸಂಕಷ್ಟ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...