alex Certify ಕಾರ್ಯಕ್ರಮದ ವೇಳೆ ಕುಸಿದ ಸ್ಟೇಜ್….! ಮಂದಹಾಸ ಮೂಡಿಸುತ್ತೆ ಮುಂದೆ ನಡೆದ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಯಕ್ರಮದ ವೇಳೆ ಕುಸಿದ ಸ್ಟೇಜ್….! ಮಂದಹಾಸ ಮೂಡಿಸುತ್ತೆ ಮುಂದೆ ನಡೆದ ಘಟನೆ

ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋಗಳಿಗೇನೂ ಕೊರತೆಯಿಲ್ಲ. ತಮಾಷೆ, ಮನರಂಜನೆಯ ವಿಡಿಯೋಗಳಿಂದ ಇಂಟರ್ನೆಟ್ ತುಂಬಿದೆ. ಇಂತಹ ಉಲ್ಲಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಕವ್ವಾಲಿ ಪ್ರದರ್ಶನದ ಮಧ್ಯದಲ್ಲಿ ವೇದಿಕೆ ಕುಸಿದ ನಂತರವೂ ಕಲಾವಿದರ ಗುಂಪು ಹೇಗೆ ಪ್ರತಿಕ್ರಿಯಿಸಿತು ಎಂಬ ಬಗ್ಗೆ ವಿಡಿಯೋದಲ್ಲಿ ನೋಡಬಹುದು. ಕವ್ವಾಲಿ ಕಾರ್ಯಕ್ರಮ ನಡೆಯುತ್ತಿರುವಾಗ ಸುಮಾರು 15 ರಿಂದ 20 ಜನರು ವೇದಿಕೆಯಲ್ಲಿ ಕುಳಿತಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ವೇದಿಕೆಯು ಕುಸಿದು ಬೀಳುತ್ತದೆ.

ಈ ವೇಳೆ ವೇದಿಕೆಯಲ್ಲಿದ್ದವರು ಗಾಬರಿಯಾಗಿ ಎದ್ದೇಳಲು ಪ್ರಯತ್ನಿಸಿದಾಗ, ಮುಖ್ಯ ಕಲಾವಿದ ಅವರನ್ನು ಗದರಿಸಿ ಕುಳಿತುಕೊಳ್ಳುವಂತೆ ಸೂಚಿಸಿದ್ದಾನೆ. ವೇದಿಕೆ ಕುಸಿದು ಬಿದ್ದರೂ ಕೂಡ ನಿರಾಂತಕವಾಗಿ ಕಲಾವಿದರು ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ.

ಈ ಉಲ್ಲಾಸದ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಲಾವಿದ ಯಾವುದೇ ಸಂದರ್ಭದಲ್ಲೂ ಗಾಬರಿಯಾಗಬಾರದು ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಇದುವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿದೆ. ವಿಡಿಯೋ ನೋಡಿದ ಜನರು ನಗೆಗಡಲಲ್ಲಿ ತೇಲಿದ್ದಾರೆ.

— Awanish Sharan (@AwanishSharan) February 27, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...