alex Certify ಕಳ್ಳರಿಂದ ಕೆಜಿಗಟ್ಟಲೇ ಚಿನ್ನ ವಶಪಡಿಸಿಕೊಂಡ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳರಿಂದ ಕೆಜಿಗಟ್ಟಲೇ ಚಿನ್ನ ವಶಪಡಿಸಿಕೊಂಡ ಪೊಲೀಸರು

ಕಲಬುರಗಿ: ಪೊಲೀಸರು, ಕಳ್ಳರನ್ನು ಬಂಧಿಸಿದ್ದಾರೆ ಎಂದರೆ, ಎರಡ್ಮೂರು ಮನೆಗಳಲ್ಲಿ ಕಳ್ಳತನದ ವಸ್ತುಗಳೋ ಅಥವಾ ನೂರಾರು ಗ್ರಾಂಗಳಷ್ಟು ಚಿನ್ನ ಸಿಕ್ಕಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ, ಇಲ್ಲಿ ಕೆಜಿಗಟ್ಟಲೇ ಬಂಗಾರ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ಪೊಲೀಸರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ 8 ಜನರನ್ನು ಬಂಧಿಸಿದ್ದರು. ಬಂಧಿತರ ಬಳಿ ಇದ್ದ ಚಿನ್ನ ನೋಡಿ ಪೊಲೀಸರೇ ಅವಾಕ್ಕಾಗಿದ್ದಾರೆ. ದರೋಡೆಕೋರರಿಂದ ಪೊಲೀಸರು ಬರೋಬ್ಬರಿ 1.68 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಚಿನ್ನದ ವ್ಯಾಪಾರಿಯನ್ನೇ ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಈ ಕುರಿತು ಮಾತನಾಡಿರುವ ಉಪ ಪೊಲೀಸ್ ಆಯುಕ್ತ ಎ. ಶ್ರೀನಿವಾಸುಲು, ಇತ್ತೀಚೆಗೆ ಚಿನ್ನದ ವ್ಯಾಪಾರಿಯ ಕೆಲಸಗಾರನ ಬಳಿಯಿದ್ದ ಚಿನ್ನ ಕಳ್ಳತನವಾಗಿತ್ತು ಎಂಬ ಕುರಿತು ದೂರು ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಅವರಿಂದ 1.68 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇವರಿಂದ ಇನ್ನೂ ದರೋಡೆಗಳು ನಡೆದಿವೆಯೇ ? ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...