alex Certify ಕಳ್ಳತನವಾಗಿದ್ದ ಕಾರನ್ನು ರಾಜಾರೋಷವಾಗಿ ಬಳಸಿ ಸಿಕ್ಕಿಬಿದ್ದ ಪೊಲೀಸರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನವಾಗಿದ್ದ ಕಾರನ್ನು ರಾಜಾರೋಷವಾಗಿ ಬಳಸಿ ಸಿಕ್ಕಿಬಿದ್ದ ಪೊಲೀಸರು….!

ಕಳ್ಳತನವಾಗಿದ್ದ ಕಾರನ್ನು ಪೊಲೀಸರೇ ರಾಜಾರೋಷವಾಗಿ ಬಳಸುತ್ತಿದ್ದು, ಖುದ್ದು ಕಾರು ಮಾಲೀಕರ ಕೈಗೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇಂತದೊಂದು ವಿಚಿತ್ರ ಘಟನೆ ದಾವಣಗೆರೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಹಳೆ ವಿಡಿಯೋ ಈಗ ವೈರಲ್‌ ಆಗಿದೆ.

ಕೆಎ-17 ಎಂಎ 1174 ನೋಂದಣಿ ಸಂಖ್ಯೆ ಹೊಂದಿರುವ ತಮ್ಮ ಕಾರು ಕಳ್ಳತನವಾಗಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ತಮ್ಮ ದೂರಿನ ವಿಚಾರಣಾ ಪ್ರಗತಿ ಕುರಿತು ಪೊಲೀಸ್‌ ಠಾಣೆಗೆ ಕರೆ ಮಾಡಿ ವಿಚಾರಿಸುತ್ತಿದ್ದರು.

ನಿಮ್ಮ ಕಾರು ಪತ್ತೆಯಾಗಿಲ್ಲ ಎಂಬ ಉತ್ತರ ಅಲ್ಲಿಂದ ಬರುತ್ತಿತ್ತು. ತಮ್ಮ ಕಾರು ದಾವಣಗೆರೆ ಬೈಪಾಸ್ ಬಳಿ ಇರುವ ವಿದ್ಯಾ ನಗರ ಸಿಗ್ನಲ್ ಕಾಫಿ ಡೇ ಮುಂದೆ ನಿಂತಿರುವುದನ್ನು ಮಾಲೀಕರು ಗಮನಿಸಿದ್ದಾರೆ. ಅಷ್ಟಕ್ಕೂ ಇದನ್ನು ತಂದವರ್ಯಾರೆಂದು ನೋಡಿದರೆ ಖುದ್ದು ಪೊಲೀಸರೇ ಚಲಾಯಿಸಿಕೊಂಡು ಬಂದಿರುವುದು ಗೊತ್ತಾಗಿದೆ.

ಆ ಬಳಿಕ ಇದನ್ನು ವಿಡಿಯೋ ಮಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬ ಹಲ್ಲೆ ನಡೆಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ತಪ್ಪಿತಸ್ಥ ಪೊಲೀಸ್‌ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...