alex Certify ಕನ್ನಡಿಗರ ಏರ್ ಲಿಫ್ಟ್; ಸರ್ಕಾರದಿಂದಲೇ ವೆಚ್ಚ ಭರಿಸಲಾಗುವುದು ಎಂದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡಿಗರ ಏರ್ ಲಿಫ್ಟ್; ಸರ್ಕಾರದಿಂದಲೇ ವೆಚ್ಚ ಭರಿಸಲಾಗುವುದು ಎಂದ ಸಿಎಂ

ಬೆಂಗಳೂರು: ಉಕ್ರೇನ್ ನಲ್ಲಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ ಮೊದಲ ತಂಡ ಆಗಮಿಸಿದೆ. ಉಳಿದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ನಡೆಯುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಉಕ್ರೇನ್ ನ ವೆಸ್ಟರ್ನ್ ಭಾಗದಲ್ಲಿದ್ದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ದೆಹಲಿ ಹಾಗೂ ಮುಂಬೈಗೆ ಬಂದಿಳಿದ ಕನ್ನಡಿಗ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆ ಮಾಡುವಂತೆ ಹೈಕಮಿಷ್ನರ್ ಗೆ ಸೂಚಿಸಲಾಗಿದೆ ಎಂದರು.

ಎರಡೇ ದಿನದಲ್ಲಿ 23.8 ಕೋಟಿ ರೂ. ಗಳಿಸಿದ ಆಲಿಯಾ ಭಟ್ ‘ಗಂಗೂಬಾಯಿ ಕಥಿಯಾವಾಡಿ’

ಕನ್ನಡಿಗರ ಸ್ಥಳಾಂತರದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಕೇಂದ್ರ ವಿದೇಶಾಂಗ ಸಚಿವರ ಜತೆಯೂ ಮಾತುಕತೆ ನಡೆಸಿದ್ದೇನೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಅಧಿಕಾರಿಗಳ ಜತೆಯೂ ಚರ್ಚಿಸಿದ್ದೇನೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಜತೆಯೂ ಮಾತನಾಡಿದ್ದೇನೆ. ಎರಡು ಸಹಾಯವಾಣಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಕರಕೈ ಪ್ರದೇಶದಲ್ಲಿ ಹೆಚ್ಚು ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಯುದ್ಧ ನಡೆಯುತ್ತಿದೆ. ಮೆಟ್ರೋ, ಬಂಕರ್ ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಯಾರೂ ಆತಂಕಪಡುವುದು ಬೇಡ. ಪರಿಸ್ಥಿತಿ ಕೊಂಚ ಸರಿಹೋಗುತ್ತಿದ್ದಂತೆ ಅವರನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...