alex Certify ಎರಡೇ ದಿನದಲ್ಲಿ 23.8 ಕೋಟಿ ರೂ. ಗಳಿಸಿದ ಆಲಿಯಾ ಭಟ್ ‘ಗಂಗೂಬಾಯಿ ಕಥಿಯಾವಾಡಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡೇ ದಿನದಲ್ಲಿ 23.8 ಕೋಟಿ ರೂ. ಗಳಿಸಿದ ಆಲಿಯಾ ಭಟ್ ‘ಗಂಗೂಬಾಯಿ ಕಥಿಯಾವಾಡಿ’

ನವದೆಹಲಿ: ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ ಬಹು ನಿರೀಕ್ಷಿತ ‘ಗಂಗೂಬಾಯಿ ಕಥಿಯಾವಾಡಿ’ ಎರಡು ದಿನಗಳಲ್ಲಿ 23.8 ಕೋಟಿ ರೂ. ಗಳಿಸಿದೆ.

ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲದಿ 10.5 ಕೋಟಿಗೆ ಕಲೆಕ್ಷನ್ ಮಾಡಿದ್ದ ಈ ಚಿತ್ರ 2 ನೇ ದಿನದಂದು 13.32 ಕೋಟಿ ಗಳಿಸಿತು. ಒಟ್ಟು ಕಲೆಕ್ಷನ್ 23.82 ಕೋಟಿ ಆಗಿದೆ.

ಪ್ರಮುಖ ನಗರಗಳಲ್ಲಿ(ವಿಶೇಷವಾಗಿ ಮುಂಬೈ ಮತ್ತು ದೆಹಲಿ) 50% ಆಕ್ಯುಪೆನ್ಸಿ ಮತ್ತು ಸೀಮಿತ ರಾತ್ರಿ ಪ್ರದರ್ಶನಗಳ ಹೊರತಾಗಿಯೂ, ಚಿತ್ರವು ಎಲ್ಲಾ ನಿರೀಕ್ಷೆಗಳನ್ನು ಮೀರಿ ಗಳಿಕೆ ಕಂಡಿದೆ.

ವಿಮರ್ಶಕರಿಂದ ಮೆಚ್ಚುಗೆ ಪಡೆದ ‘ಗಂಗೂಬಾಯಿ ಕಥಿಯಾವಾಡಿ’ ಇಲ್ಲಿಯವರೆಗಿನ ಆಲಿಯಾ ಅವರ ಅತ್ಯುತ್ತಮ ಅಭಿನಯ ಎಂದು ಹೇಳಲಾಗುತ್ತದೆ. ಇಂಡಸ್ಟ್ರಿಯ ಒಳಗಿನವರಿಂದ ಹಿಡಿದು ಪ್ರೇಕ್ಷಕರವರೆಗೆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್, ವಿಜಯ್ ರಾಜ್ ಮತ್ತು ಶಂತನು ಮಹೇಶ್ವರಿ ಕೂಡ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...