alex Certify ಕದ್ದ ಯಂತ್ರದ ಪತ್ತೆಗಾಗಿ ಪೊಲೀಸರಿಂದ ಬರೋಬ್ಬರಿ 45 ಸಿಸಿ ಕ್ಯಾಮರಾಗಳ ಪರಿಶೀಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕದ್ದ ಯಂತ್ರದ ಪತ್ತೆಗಾಗಿ ಪೊಲೀಸರಿಂದ ಬರೋಬ್ಬರಿ 45 ಸಿಸಿ ಕ್ಯಾಮರಾಗಳ ಪರಿಶೀಲನೆ

ಬರೋಬ್ಬರಿ 96 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಮುಂಬೈನ ಆರೆ ಪೊಲೀಸ್,​​ ಆರೋಪಿಯನ್ನು ವೈಭವ್​ ಥೋರ್ವೆ ಎಂದು ಗುರುತಿಸಿದ ಬಳಿಕ ಅಂಧೇರಿ ಮಹಾಕಾಳಿ ಗುಹೆಯ ಪ್ರದೇಶದಿಂದ ಬಂಧಿಸಿದ್ದಾರೆ.

ಆರೋಪಿಯು ಕಾಡಿನಲ್ಲಿ ಬಚ್ಚಿಟ್ಟಿದ್ದ ಕದ್ದ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 7ರಂದು ಈಗಲ್​ ಇನ್​ಫ್ರಾ ಇಂಡಿಯಾದ ಗ್ರೌಂಡ್​ ಸರ್ವೇ ಯಂತ್ರ ಕಣ್ಮರೆಯಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯ ಪೊಲೀಸ್​ ಅಧಿಕಾರಿ ಉಲ್ಲಾಸ್​ ಖೋಲಂ ಹಾಗೂ ಸಚಿನ್​ ಪಂಚನ್​ ನೇತೃತ್ವದಲ್ಲಿ ಈ ಪ್ರಕರಣವನ್ನು ಭೇದಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸ್​ ತಂಡವು ಆರೆಯಿಂದ ಸೀಪ್ಜ್​​ ಪ್ರದೇಶದ ನಡುವೆ 45 ಸಿಸಿ ಕ್ಯಾಮರಾಗಳನ್ನು ನಿರಂತರವಾಗಿ 96 ಗಂಟೆಗಳಿಗೂ ಅಧಿಕ ಕಾಲ ಶೋಧ ಮಾಡಿದೆ.

ಆರೋಪಿಯನ್ನು ನಿರಂತರ ವಿಚಾರಣೆಗೆ ಒಳಪಡಿಸಿದ ಬಳಿಕ ಆತ ಆರೆ ಅರಣ್ಯದಲ್ಲಿ ಯಂತ್ರವನ್ನು ಬಚ್ಚಿಟ್ಟಿದ್ದಾಗಿ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಸರಿ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ಈ ಯಂತ್ರದ ಮೌಲ್ಯವು ಆರೋಪಿಗೆ ತಿಳಿದಿರಲಿಲ್ಲ. ಇದನ್ನು ಮಾರಾಟ ಮಾಡಲು ಆರೋಪಿಯು ಗ್ರಾಹಕರನ್ನು ಹುಡುಕುತ್ತಿದ್ದ ಎನ್ನಲಾಗಿದೆ. ಆರೋಪಿಯ ವಿರುದ್ಧ ಪೊಲೀಸ್​ ಭಾರತೀಯ ದಂಡ ಸಂಹಿತೆ 461 ಹಾಗೂ 37ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...