alex Certify ಓದುತ್ತಿರುವಾಗಲೇ ಘೋರ ದುರಂತ; ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ 6 ವರ್ಷದ ಬಾಲಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓದುತ್ತಿರುವಾಗಲೇ ಘೋರ ದುರಂತ; ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ 6 ವರ್ಷದ ಬಾಲಕಿ ಸಾವು

ಉತ್ತರ ಪ್ರದೇಶದ ಅಮೀರ್ಪುರ್ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ತನ್ನ ಸ್ನೇಹಿತರ ಜೊತೆ ಮನೆ ಮಹಡಿ ಮೇಲೆ ಓದಿಕೊಳ್ಳುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿದ ಪರಿಣಾಮ ಸಾವಿಗೀಡಾಗಿದ್ದಾಳೆ.

ಪಹಡಿ ವೀರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆರು ವರ್ಷದ ಆರ್ಥಿಕಾ ಮೃತಪಟ್ಟ ಬಾಲಕಿಯಾಗಿದ್ದಾಳೆ. ಈಕೆ ಬರೆಯಲು ಮುಂದಾದಾಗ ಪೆನ್ಸಿಲ್ ಮದ್ದು ಮುರಿದಿದೆ.

ಹೀಗಾಗಿ ಬಾಯಲ್ಲಿ ಕಚ್ಚಿ ತೆಗೆಯುವಾಗ ಅದರ ಸಿಪ್ಪೆ ಗಂಟಲಲ್ಲಿ ಸಿಲುಕಿಕೊಂಡಿದೆ. ಇದರ ಪರಿಣಾಮ ಉಸಿರುಗಟ್ಟಿ ಆಕೆ ಒದ್ದಾಡತೊಡಗಿದ್ದು, ಗಾಬರಿಗೊಂಡ ಸ್ನೇಹಿತರು ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರು ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...