alex Certify ಒಲಿದ ಅದೃಷ್ಟ: ಆರ್ಡರ್​ ಮಾಡಿದ್ದು ಐಫೋನ್​ 13, ಸ್ವೀಕರಿಸಿದ್ದು ಐಫೋನ್​ 14….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿದ ಅದೃಷ್ಟ: ಆರ್ಡರ್​ ಮಾಡಿದ್ದು ಐಫೋನ್​ 13, ಸ್ವೀಕರಿಸಿದ್ದು ಐಫೋನ್​ 14….!

ಈಗ ಎಲ್ಲೆಲ್ಲೂ ಐಫೋನ್​ 14 ಹವಾ. ಯುವಕರ ಕ್ರೇಜ್​ ಹೆಚ್ಚಿಸಿರುವ ಈ ಮೊಬೈಲ್​ ಫೋನ್​ ಹೊಂದಿರಬೇಕೆಂಬುದು ಅನೇಕರ ಆಶಯ. ಇಲ್ಲೊಬ್ಬ ಮಹಾಶಯನಿಗೆ ಈ ಮೊಬೈಲ್​ ಅನಾಯಾಸವಾಗಿ ಒಲಿದುಬಂದಿದೆ.

ಭಾರತದಲ್ಲಿ ಹಬ್ಬದ ಋತುವಾಗಿದ್ದು, ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿ ಮತ್ತು ಆಫರ್​ಗಳ ಸುರಿಮಳೆಯೇ ಪ್ರಕಟವಾಗಿದೆ. ಗ್ರಾಹಕರು ಉತ್ತಮ ಆಫರ್​ ಲಾಭ ಪಡೆಯಲು ಶಾಪಿಂಗ್​ ವೆಬ್​ಸೈಟ್​ ಗಳಲ್ಲಿ ಸರ್ಚಿಂಗ್ ನಡೆಸಿದ್ದಾರೆ.

ಇದೇ ವೇಳೆ ಇಲ್ಲೊಬ್ಬ ವ್ಯಕ್ತಿಯು ತಾನು ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಮೊಬೈಲ್​ ಫೋನ್​ನ ಅಪ್ಡೇಟೆಡ್​ ಎಡಿಷನ್​ ಪಡೆಯುವ ಅದೃಷ್ಟಶಾಲಿಯಾಗಿದ್ದರು. ಐಫೋನ್​ 13 ರ ಬದಲಿಗೆ ಐಫೋನ್​ 14 ಅನ್ನು ಸ್ವೀಕರಿಸಿದ್ದಾರೆ. ಅವರಿಗೆ ಅದೃಷ್ಟ ಒಲಿದುಬಂದಿದೆ.

ಟ್ವಿಟರ್​ ಬಳಕೆದಾರ ಅಶ್ವಿನ್​ ಹೆಗ್ಡೆ ಅವರು ತಮ್ಮ ಫಾಲೋಯರ್​ ಫ್ಲಿಪ್​ಕಾರ್ಟ್​ನಿಂದ ಐಫೋನ್​-13 ಆರ್ಡರ್​ ಮಾಡಿದ್ದಾರೆ. ಆದರೆ ಬದಲಿಗೆ ಐಫೋನ್​-14 ಅನ್ನು ಸ್ವೀಕರಿಸಿದ್ದಾರೆ ಎಂದು ಫೋನ್​ ಆರ್ಡರ್​ ಆದೇಶದ ಸ್ಕ್ರೀನ್​ಶಾಟ್​ ಸಹಿತ ಹಂಚಿಕೊಂಡಿದ್ದು ಟ್ವೀಟ್​ ಮಾಡಿದ್ದಾರೆ.

ಈ ಟ್ವೀಟ್​ ವೈರಲ್​ ಆಗಿದೆ, ಮತ್ತು ಅನೇಕರು ಆತನ ಅದೃಷ್ಟವನ್ನು ನಂಬಲು ಸಿದ್ಧವಿಲ್ಲ. ಒಬ್ಬ ವ್ಯಕ್ತಿ ಆಪಲ್​ಗೆ ತಮಾಷೆ ಮಾಡಿ, “ಐಫೋನ್​ 13 ಮತ್ತು 14 ಎಷ್ಟು ಹೋಲುತ್ತವೆ ಎಂದರೆ ಫ್ಲಿಪ್​ಕಾರ್ಟ್​ 14 ಅನ್ನು 13 ಎಂದು ತಪ್ಪಾಗಿ ಭಾವಿಸಿದೆ” ಎಂದು ಬರೆದಿದ್ದಾರೆ. ಇನ್ನು ಕೆಲವರು ಪ್ರಾಮಾಣಿಕತೆ ಮೆರೆದು ಫೋನ್​ ಹಿಂತಿರುಗಿಸಬೇಕು ಎಂದಿದ್ದಾರೆ.

— Ashwin Hegde (@DigitalSphereT) October 4, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...