alex Certify ಒಲಿಂಪಿಕ್ಸ್​​ 2020: ಇಲ್ಲಿದೆ ಭಾಗವಹಿಸಲಿರುವ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್ಸ್​​ 2020: ಇಲ್ಲಿದೆ ಭಾಗವಹಿಸಲಿರುವ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿ

ಟೋಕಿಯೋ ಒಲಿಂಪಿಕ್​​ 2020ಕ್ಕೆ ಭಾರತದಿಂದ 100ಕ್ಕೂ ಅಧಿಕ ಆಟಗಾರರು ಆಯ್ಕೆಯಾಗಿದ್ದಾರೆ, 2 ರಿಲೆ ಹಾಗೂ 2 ಹಾಕಿ ತಂಡ ಸೇರಿದಂತೆ ಈ ಬಾರಿಯ ಬೇಸಿಗೆಯ ಒಲಿಂಪಿಕ್​​ಗೆ ಭಾಗಿಯಾಗುತ್ತಿರುವ ಭಾರತೀಯ ಆಟಗಾರರ ಸಂಖ್ಯೆ ಹಿಂದಿನ ಮೂರು ಆವೃತ್ತಿಗಿಂತಲೂ ಅಧಿಕವಾಗಿದೆ.

ಆರ್ಚರಿ

ತರುಣ್​ದೀಪ್​ ರೈ, ಪುರುಷರ ರೀ ಕರ್ವ್​

ಅಟಾನು ದಾಸ್​, ಪುರುಷರ ರೀ ಕರ್ವ್​

ಪ್ರವೀಣ್​ ಜಾಧವ್​, ಪುರುಷರ ರೀ ಕರ್ವ್​

ದೀಪಿಕಾ ಕುಮಾರಿ, ಮಹಿಳೆಯರ ವಿಭಾಗದ ರೀ ಕರ್ವ್

ಟೋಕಿಯಾ 2020ರಲ್ಲಿ ಮೂವರು ಪುರುಷರು ತಂಡವಾಗಿಯೂ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ.

ಅಥ್ಲೆಟಿಕ್ಸ್

ಒಲಿಂಪಿಕ್​ನ ಅಥ್ಲೆಟಿಕ್​ ವಿಭಾಗದಲ್ಲಿ ಭಾರತ ಎಂದಿಗೂ ಭರ್ಜರಿ ಪ್ರದರ್ಶನವನ್ನ ತೋರಿಲ್ಲ. ಆದರೆ ಈ ಬಾರಿ ಅಥ್ಲೀಟ್​ಗಳಾಗಿ ನೀರಜ್​ ಚೋಪ್ರಾ ಹಾಗೂ ಶಿವಪಾಲ್​ ಸಿಂಗ್​​ ಭಾಗಿಯಾಗಿದ್ದು ಈ ಭಾರಿ ಭಾರತ ಕೂಡ ಸಾಧನೆ ಮಾಡಬಹುದು ಎಂಬ ಭರವಸೆ ಮೂಡಿದೆ.

4×400 ಮಿಶ್ರ ರಿಲೆಯಲ್ಲಿ ಈ ಬಾರಿ ಭಾರತ ಕೂಡ ಸ್ಪರ್ಧೆ ಮಾಡಲಾಗಿದ್ದು ಏಷಿಯನ್​ ಚಿನ್ನದ ಪದಕ ವಿಜೇತರಾದ ಮುಹಮ್ಮದ್​ ಅನಸ್​ ಭಾಗಿಯಾಗಲಿದ್ದಾರೆ. ಕೆ.ಟಿ. ಇರ್ಫಾನ್​​ 2019ರ ಮಾರ್ಚ್ ತಿಂಗಳಲ್ಲಿ 2020ರ ಒಲಿಂಪಿಕ್​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಕೀರ್ತಿ ಸಂಪಾದಿಸಿದ್ದರು. ಅದೇ ರೀತಿ ಭಾರತದ ದ್ಯುತಿ ಚಂದ್​ ಕೂಡ ತಮ್ಮ ಎರಡನೇ ಒಲಿಂಪಿಕ್​ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಕೆ.ಟಿ. ಇರ್ಫಾನ್​ – 20 ಕಿಮಿ ರೇಸ್​ ವಾಕಿಂಗ್​

ಸಂದೀಪ್​ ಕುಮಾರ್​ – ಪುರುಷರ 20 ಕಿಮೀ ರೇಸ್​ ವಾಕಿಂಗ್​

ರಾಹುಲ್​ ರೋಹಿಲಾ – ಪುರುಷರ 20 ಕಿಮೀ ರೇಸ್​ ವಾಕಿಂಗ್​

ಗುರುಪ್ರೀತ್​ ಸಿಂಗ್​ – ಪುರುಷರ 50 ಕಿಮೀ ರೇಸ್​ ವಾಕಿಂಗ್​

ಭಾವನಾ ಜಾಟ್​ – ಮಹಿಳೆಯರ 20 ಕಿಮೀ ರೇಸ್ ವಾಕಿಂಗ್​

ಪ್ರಿಯಾಂಕಾ ಗೋಸ್ವಾಮಿ – ಮಹಿಳೆಯರ 20 ಕಿಮೀ ರೇಸ್​ ವಾಕಿಂಗ್​

ಅವಿನಾಶ್​ ಸಾಬ್ಲೆ – ಪುರುಷರ 3000 ಮೀ ಓಟ

ಮುರುಳಿ ಶ್ರೀಶಂಕರ್​ – ಪುರುಷರ ಉದ್ದ ಜಿಗಿತ

ಎಂಪಿ ಜಬೀರ್​- 400 ಮೀ ಹರ್ಡಲ್ಸ್

ನೀರಜ್​ ಚೋಪ್ರಾ- ಪುರುಷರ ಜಾವಲಿನ್​ ಎಸೆತ

ಶಿವಪಾಲ್​ ಸಿಂಗ್​ – ಪುರುಷರ ಜಾವಲಿನ್ ಎಸೆತ

ಅನ್ನು ರಾಣಿ – ಮಹಿಳೆಯರ ಜಾವಲಿನ್​ ಎಸೆತ

ತಜೀಂದರ್​ಪಾಲ್​ ಸಿಂಗ್​ – ಪುರುಷರ ಗುಂಡು ಎಸೆತ

ದ್ಯುತಿ ಚಂದ್​ – ಮಹಿಳೆಯರ 100 ಮೀ ಹಾಗೂ 200 ಮೀ ಓಟ

ಕಮಲ್​ಪ್ರೀತ್​ ಕೌರ್​ – ಮಹಿಳೆಯರ ಚಕ್ರ ಎಸೆತ

ಸೀಮಾ ಪುನಿಯಾ – ಮಹಿಳೆಯರ ಚಕ್ರ ಎಸೆತ

ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್​ ಆಟಗಾರ್ತಿ​ ಪಿ.ವಿ. ಸಿಂಧು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಲಿದ್ದು, ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಬ್ಯಾಡ್ಮಿಂಟನ್​ ಪುರುಷರ ವಿಭಾಗದ ಸಿಂಗಲ್ಸ್​ನಲ್ಲಿ ಸಾಯಿ ಪ್ರಣೀತ್​​ ಹಾಗೂ ಸಾತ್ವಿಕ್​ರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್​ ಶೆಟ್ಟಿ ಡಬಲ್ಸ್​ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಪಿವಿ ಸಿಂಧು – ಮಹಿಳಾ ಸಿಂಗಲ್ಸ್

ಬಿ. ಸಾಯಿ ಪ್ರಣೀತ್​ – ಪುರುಷರ ಸಿಂಗಲ್ಸ್

ಸಾತ್ವಿಕ್​ರಾಜ್​ ರಾಂಕಿ ರೆಡ್ಡಿ ಹಾಗೂ ಚಿರಾಗ್​ ಶೆಟ್ಟಿ – ಪುರುಷರ ಡಬಲ್ಸ್

ಬಾಕ್ಸಿಂಗ್​ ವಿಭಾಗ :

ವಿಕಾಸ್​ ಕೃಷ್ಣನ್​ – 69 ಕೆಜಿ, ಪುರುಷರ ವಿಭಾಗ

ಲೊವ್ಲಿನಾ ಬೊರ್ಗೊಹೈನ್ – 69 ಕೆಜಿ, ಮಹಿಳೆಯರ ವಿಭಾಗ

ಆಶಿಷ್​ ಕುಮಾರ್​ – 75 ಕೆಜಿ, ಪುರುಷರ ವಿಭಾಗ

ಪೂಜಾ ರಾಣಿ – 75 ಕೆಜಿ, ಮಹಿಳೆಯರ ವಿಭಾಗ

ಸತೀಶ್​ ಕುಮಾರ್​ – 91 ಕೆಜಿ, ಪುರುಷರ ವಿಭಾಗ

ಮೇರಿ ಕೋಮ್​ – 51 ಕೆಜಿ, ಮಹಿಳೆಯರ ವಿಭಾಗ

ಅಮಿತ್​ ಪಂಘಲ್​ – 52 ಕೆಜಿ, ಪುರುಷರ ವಿಭಾಗ

ಮನೀಶ್​ ಕೌಶಿಕ್​ – 63 ಕೆಜಿ, ಪುರುಷರ ವಿಭಾಗ

ಸಿಮ್ರಾನ್‌ ಜಿತ್‌ ಕೌರ್-‌ 60 ಕೆಜಿ, ಮಹಿಳೆಯರ ವಿಭಾಗ

ಕುದುರೆ ಸವಾರಿ :

ಕಳೆದ 20 ವರ್ಷಗಳ ಭಾರತದ ಇತಿಹಾಸದಲ್ಲಿ ಅಶ್ವಾರೋಹಣ ವಿಭಾಗದಲ್ಲಿ ಆಯ್ಕೆಯಾದ ಮೊದಲ ಆಟಗಾರ ಎಂಬ ಕೀರ್ತಿಗೆ ಫೌವಾದ್​ ಮಿರ್ಜಾ ಪಾತ್ರರಾಗಿದ್ದಾರೆ.

ಫೆನ್ಸಿಂಗ್​ (ಕತ್ತಿ ವರಸೆ)

ಒಲಿಂಪಿಕ್​ನ ಈ ವಿಭಾಗದಲ್ಲಿ ಆಯ್ಕೆಯಾದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭವಾನಿ ದೇವಿ ಪಾತ್ರರಾಗಿದ್ದಾರೆ.

ಗಾಲ್ಫ್​

ಅನಿರ್ಬನ್​ ಲಹರಿ ಹಾಗೂ ಉದಯನ್​ ಮಾನೆ – ಪುರುಷರ ವಿಭಾಗ

ಅದಿತಿ ಅಶೋಕ್​ – ಮಹಿಳೆಯರ ವಿಭಾಗ

ಜಿಮ್ನಾಸ್ಟಿಕ್​

ಪ್ರಣತಿ ನಾಯಕ್​ ಒಲಿಂಪಿಕ್​ನಲ್ಲಿ ಭಾರತವನ್ನ ಪ್ರತಿನಿಧಿಸುತ್ತಿರುವ 2ನೇ ಕ್ರೀಡಾಪಟು ಆಗಿದ್ದಾರೆ.

ಹಾಕಿ

ಪುರುಷರ ರಾಷ್ಟ್ರೀಯ ತಂಡ

ಮಹಿಳೆಯರ ರಾಷ್ಟ್ರೀಯ ತಂಡ

ಭಾರತೀಯ ಪುರುಷರ ಹಾಕಿ ತಂಡಕ್ಕೆ ಇದು 20ನೇ ಒಲಿಂಪಿಕ್​ ಪಂದ್ಯಾವಳಿ ಆಗಿದ್ದರೆ ಮಹಿಳಾ ತಂಡಕ್ಕೆ ಮೂರನೇ ಒಲಿಂಪಿಕ್​ ಹಾಕಿ ಪಂದ್ಯವಾಗಿದೆ. ಪುರುಷರ ಹಾಕಿ ತಂಡವನ್ನ ಮನ್​ಪ್ರೀತ್​ ಸಿಂಗ್​ ಹಾಗೂ ಮಹಿಳೆಯರ ಹಾಕಿ ತಂಡಕ್ಕೆ ರಾಣಿ ರಾಮಪಾಲ್​ ನಾಯಕರಾಗಿದ್ದಾರೆ.

ಜುಡೋ

ಜುಡೋದಲ್ಲಿ ಭಾರತದ ಏಕೈಕ ಆಟಗಾರ್ತಿ ಸುಶೀಲಾ ದೇವಿ ಲಿಕಂಬಮ್​ ಭಾಗಿಯಾಗಲಿದ್ದಾರೆ.

ರೋಯಿಂಗ್​ : ಅರ್ಜುನ್​ ಜಾಟ್​ ಹಾಗೂ ಅರವಿಂದ್​ ಸಿಂಗ್​

ನೌಕಾಯಾನ :

ಒಲಿಂಪಿಕ್ಸ್​ ಪಂದ್ಯಾವಳಿಯಲ್ಲಿ ಈ ವಿಭಾಗದಲ್ಲಿ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೆ ನೇತ್ರಾ ಕುಮಾರನ್​ ಪಾತ್ರರಾಗಿದ್ದಾರೆ. ನೇತ್ರಾ ಕುಮಾರನ್​​ ಜೊತೆಗೆ ಇನ್ನು ಮೂವರು ಆಟಗಾರರು ನೌಕಾಯಾನದಲ್ಲಿ ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತವು ಒಂದಕ್ಕಿಂತ ಹೆಚ್ಚು ನೌಕಾಯಾನ ಸ್ಪರ್ಧೆಯಲ್ಲಿ ಭಾಗಿಯಾಗಲಿದೆ. ಲೇಸರ್​ ರೇಡಿಯಲ್​, ಲೇಸರ್​ ಸ್ಟಾಂಡರ್ಡ್​ ಹಾಗೂ 49erನಲ್ಲಿ ಭಾರತವು ಸ್ಪರ್ಧಿಸಲಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​​ನ ನೌಕಾಯಾನ ಸರ್ಧೆಯಲ್ಲಿ 2ಕ್ಕಿಂತ ಹೆಚ್ಚು ಆಟಗಾರರು ಸ್ಪರ್ಧೆಯಲ್ಲಿದ್ದಾರೆ.

ನೇತ್ರಾ ಕುಮಾರನ್​ – ಲೇಸರ್ ರೇಡಿಯಲ್​

ವಿಷ್ಣು ಶರವಣನ್​ – ಲೇಸರ್​ ಸ್ಟಾಂಡರ್ಡ್​

ಕೆವಿ ಗಣಪತಿ ಹಾಗೂ ವರುಣ್​ ಠಾಕೂರ್​ – 49 er

ಶೂಟಿಂಗ್ :

ಅಂಜುಮ್​ ಮೌಡ್​ಗಿಲ್​ – 10 ಮೀ, ಮಹಿಳೆಯರ ಏರ್​ ರೈಫಲ್​

ಅಪೂರ್ವಿ ಚಂಡೇಲಾ – 10 ಮೀ, ಮಹಿಳೆಯರ ಏರ್​ ರೈಫಲ್​

ದಿವ್ಯಾಂಶ್​ ಸಿಂಗ್​ ಪಾನ್ವರ್​ – 10 ಮೀ, ಪುರುಷರ ಏರ್​ ರೈಫಲ್​

ದೀಪಕ್​ ಕುಮಾರ್​ – 10 ಮೀ, ಪುರುಷರ ಏರ್​ ರೈಫಲ್​

ತೇಜಸ್ವಿನಿ ಸಾವಂತ್​ – 50 ಮೀ, ಮಹಿಳೆಯರ ರೈಫಲ್​ 3 ಪೊಸಿಷನ್​​

ಸಂಜೀವ್​ ರಜಪೂತ್​ – 50 ಮೀ, ಪುರುಷರ ರೈಫಲ್​

ಐಶ್ವರ್ಯಾ ಪ್ರತಾಪ್​ ಸಿಂಗ್​ ತೋಮರ್​ – 50 ಮೀ, ಪುರುಷರ ರೈಫಲ್​

ಮನು ಭಾಕರ್ – 10 ಮೀ, ಪುರುಷರ ಏರ್​ ಪಿಸ್ತೂಲ್​

ಯಶಸ್ವಿನಿ​ ಸಿಂಗ್​ ದೇಸ್ವಾಲ್​ – 10 ಮೀ ಮಹಿಳೆಯರ ಏರ್​ ಪಿಸ್ತೂಲ್​

ಸೌರಭ್​ ಚೌಧರಿ – 10 ಮೀ ಪುರುಷರ ಏರ್​ ಪಿಸ್ತೂಲ್​

ಅಭಿಷೇಕ್​ ವರ್ಮಾ – 10 ಮೀ ಪುರುಷರ ಏರ್​ ಪಿಸ್ತೂಲ್​

ರಾಹಿ ಸರ್ನಬಾಟ್​ – 25 ಮೀಟರ್​​ ಮಹಿಳೆಯರ ಪಿಸ್ತೂಲ್​

ಚಿಂಕಿ ಯಾದವ್​ – 25 ಮೀಟರ್​ ಮಹಿಳೆಯರ ಪಿಸ್ತೂಲ್​

ಅಂಗಾದ್​ ವೀರ್​ ಸಿಂಗ್​ ಬಾಜ್ವಾ – ಪುರುಷರ ಸ್ಕೀಟ್​

ಮೈರಾಜ್​​ ಅಹಮದ್​ ಖಾನ್​ – ಪುರುಷರ ಸ್ಕೀಟ್​

ಈಜು :

ಸಂಜನ್​ ಪ್ರಕಾಶ್​ – 200 ಮೀಟರ್​ ಬಟರ್​ಫ್ಲೈ

ಶ್ರೀಹರಿ ನಟರಾಜ್​ – 100 ಮೀಟರ್​ ಬ್ಯಾಕ್​ಸ್ಟ್ರೋಕ್​

ಮಾನಾ ಪಟೇಲ್​ – 100 ಮೀ. ಬ್ಯಾಕ್​ಸ್ಟ್ರೋಕ್​

ಟೇಬಲ್​ ಟೆನ್ನಿಸ್​ :

ಶರತ್​ ಕಮಲ್​

ಸಥ್ಯನ್​ ಗಣೇಶ್​​

ಸುತೀರ್ಥ ಮುಖರ್ಜಿ

ಮನಿಕಾ ಬಾಥ್ರಾ

ಟೆನ್ನಿಸ್​ :

1992ರಿಂದ ಒಲಿಂಪಿಕ್​ ಗೇಮ್ಸ್​ನಲ್ಲಿ ಯಾವುದೇ ಪುರುಷ ಟೆನ್ನಿಸ್​ ಆಟಗಾರ ಸ್ಪರ್ಧೆಯಲ್ಲಿ ಭಾಗಿಯಾಗಿಲ್ಲ. ರ್ಯಾಕಿಂಗ್​ ಆಧಾರದದಲ್ಲಿ ಸಾನಿಯಾ ಮಿರ್ಜಾ ಮಾತ್ರ ಟೋಕಿಯೋ ಒಲಿಂಪಿಕ್​ನಲ್ಲಿ ಸ್ಥಾನ ಪಡೆದಿದ್ದಾರೆ. ಸಾನಿಯಾ‌ – ಅಂಕಿತಾ ರೈನಾರನ್ನ ಮಹಿಳೆಯರ ಡಬಲ್ಸ್​ಗೆ ಆಯ್ಕೆ ಮಾಡಿಕೊಂಡಿದ್ದಾರೆ.

ವೇಯ್ಟ್​ಲಿಫ್ಟಿಂಗ್​ :

ಮೀರಾಬಾಯಿ ಚನು ವೇಯ್ಟ್​ಲಿಫ್ಟಿಂಗ್​ ವಿಭಾಗದಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ.

ಕುಸ್ತಿ :

ಸೀಮಾ ಬಿಸ್ಲಾ – 50 ಕೆಜಿ, ಮಹಿಳಾ ಫ್ರೀಸ್ಟೈಲ್​

ವಿನೇಶ್​ ಪೋಗಟ್​ – 52 ಕೆಜಿ ಮಹಿಳಾ ಫ್ರೀಸ್ಟೈಲ್​​

ಅಂಶು ಮಲಿಕ್​ – 57 ಕೆಜಿ ಮಹಿಳಾ ಫ್ರೀಸ್ಟೈ;್​

ಸೋನಮ್​ ಮಲಿಕ್​ – 62 ಕೆಜಿ ಮಹಿಳಾ ಫ್ರೀ ಸ್ಟೈಲ್​​

ರವಿಕುಮಾರ್​ ದಹಿಯಾ – 57 ಕೆಜಿ ಪುರುಷರ ಫ್ರೀ ಸ್ಟೈಲ್​​

ಭಜರಂಗ್​ ಪುನಿಯಾ – ಪುರುಷರ ಫ್ರೀ ಸ್ಟೈಲ್​, 65 ಕೆಜಿ

ದೀಪಕ್​ ಪುನಿಯಾ – 86 ಕೆಜಿ ಪುರುಷರ ಫ್ರೀಸ್ಟೈಲ್​

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...