alex Certify ಐಪಿಓಗಾಗಿ ಎಲ್​ಐಸಿ ಜೊತೆಗೆ ಪಾನ್​ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಓಗಾಗಿ ಎಲ್​ಐಸಿ ಜೊತೆಗೆ ಪಾನ್​ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಟಿಪ್ಸ್

ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಓ ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಹೊರಬೀಳಲಿದೆ. ಆದರೂ ಸಹ ಎಲ್​​ಐಸಿ ಪಾಲಿಸಿದಾರರು ತಮ್ಮ ಪಾನ್​ ಕಾರ್ಡ್​ನ್ನು ಪಾಲಿಸಿಯ ಜೊತೆಗೆ ಲಿಂಕ್​ ಮಾಡುವುದು ಅತ್ಯಂತ ಅವಶ್ಯಕವಾಗಿದೆ.

ಎಲ್​ಐಸಿಯು ಇತ್ತೀಚಿಗೆ ತನ್ನೆಲ್ಲ ಪಾಲಿಸಿದಾರರಿಗೆ ಅನ್ವಯವಾಗುವಂತೆ ಕಂಪನಿಯ ಮುಂಬರುವ ಐಪಿಓ ಚಂದಾದಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ಕಂಪನಿಯ ದಾಖಲೆಗಳಲ್ಲಿ ತಮ್ಮ ಪಾನ್​ ಕಾರ್ಡ್​ನ್ನು ಲಿಂಕ್​ ಮಾಡಿದರೆ ಮಾತ್ರ ಅದರ ಮುಂಬರುವ ಐಪಿಓದ ಚಂದಾದಾರರಾಗಬಹುದು ಎಂದು ಹೇಳಿದೆ.

ನಮ್ಮ ಪಾಲಿಸಿದಾರರ ಹಿತದೃಷ್ಟಿಯಿಂದ, LIC ದಾಖಲೆಗಳಲ್ಲಿ PAN ಅನ್ನು ನವೀಕರಿಸಲು ಪಾಲಿಸಿದಾರರಿಗೆ ಕರೆ ನೀಡುವ ಜಾಹೀರಾತುಗಳನ್ನು ನೀಡುತ್ತಿದ್ದೇವೆ ಎಂದು LIC ಹೇಳಿದೆ.

ಆನ್​ಲೈನ್​​ನಲ್ಲಿ ಎಲ್​ಐಸಿಗೆ ಪಾನ್​ ಕಾರ್ಡ್​ ದಾಖಲೆ ಅಪ್​ಡೇಟ್​ ಮಾಡಲು ಇಲ್ಲಿದೆ ಮಾರ್ಗ :

1. www.licindia.in ಅಥವಾ https://licindia.in/Home/Online-PAN-Registration ಗೆ ಭೇಟಿ ನೀಡಿ.

2. ನಿಮ್ಮ ಪಾಲಿಸಿ ಸಂಖ್ಯೆ, ಪಾನ್​. ಜನ್ಮ ದಿನಾಂಕ ಹಾಗೂ ಇಮೇಲ್​ ಐಡಿಯನ್ನು ನೀವು ಒದಗಿಸಬೇಕಾಗುತ್ತದೆ.

3. ಈ ಲಿಂಕ್​​ನಲ್ಲಿ ನೀವು ನಿಮ್ಮೆಲ್ಲ ಎಲ್​ಐಸಿ ಪಾಲಿಸಿಗಳ ದಾಖಲೆಯನ್ನು ಅಪ್​ಡೇಟ್​ ಮಾಡಬೇಕು.

4. ನಿಮ್ಮ ಪಾಲಿಸಿಯಲ್ಲಿ ಪಾನ್​ ಕಾರ್ಡ್ ಲಿಂಕ್​ ಆಗಿದೆಯೋ ಅಥವಾ ಇಲ್ಲವೋ ಎಂದು ಪರಿಶೀಲಿಸಲು www.licindia.in OR https://linkpan.licindia.in/UIDSeedingWebApp/getPolicyPANStatus ಗೆ ಭೇಟಿ ನೀಡಿ.

5. ಇದನ್ನು ಹೊರತುಪಡಿಸಿ ನೀವು ಎಲ್​ಐಸಿ ಏಜೆಂಟ್​ನ್ನು ಸಂಪರ್ಕಿಸುವ ಮೂಲಕವೂ ಪಾನ್​ ಕಾರ್ಡ್ ಲಿಂಕ್​ ಮಾಡಬಹುದು.

LIC, LIC ಕಾಯ್ದೆ 1956 ರ ಅಡಿಯಲ್ಲಿ ರಚಿಸಲಾದ ಶಾಸನಬದ್ಧ ನಿಗಮವಾಗಿದೆ, ಇದು ಸಂಪೂರ್ಣವಾಗಿ ಸರ್ಕಾರದ ಒಡೆತನದ ಭಾರತದ ಪ್ರಮುಖ ಜೀವ ವಿಮಾ ಕಂಪನಿಯಾಗಿದೆ.

ಇದು ಭಾರತದ ಹೊರಗೆ ಮೂರು ಶಾಖೆಗಳನ್ನು ಹೊಂದಿದೆ – ಬ್ರಿಟನ್​​, ಫಿಜಿ ಮತ್ತು ಮಾರಿಷಸ್, ಸಿಂಗಾಪುರದಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮತ್ತು ಬಹ್ರೇನ್, ಕೀನ್ಯಾ, ಶ್ರೀಲಂಕಾ, ನೇಪಾಳ, ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದಲ್ಲಿ ಜಂಟಿ ಉದ್ಯಮಗಳನ್ನು ಹೊಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...