alex Certify BIG NEWS: ಐಪಿಎಲ್ ಹರಾಜು ಪ್ರಕ್ರಿಯೆ ವೇಳೆಯೇ ಕುಸಿದು ಬಿದ್ದ ಹರಾಜುದಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಪಿಎಲ್ ಹರಾಜು ಪ್ರಕ್ರಿಯೆ ವೇಳೆಯೇ ಕುಸಿದು ಬಿದ್ದ ಹರಾಜುದಾರ…!

ಐಪಿಎಲ್ ಕ್ರಿಕೆಟ್ ಜಗತ್ತಿನ ಅತಿದೊಡ್ಡ, ಅತ್ಯಂತ ಶ್ರೀಮಂತ ಲೀಗ್. ಇಂದು ಬೆಂಗಳೂರಿನಲ್ಲಿ ಈ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆಕ್ಷನ್ ಶುರುವಾಗಿ ಆಟಗಾರರ ಆಯ್ಕೆಯು ನಡೆಯುತ್ತಿತ್ತು, ಇದರ ನಡುವೆಯೇ ಪ್ರಸಿದ್ಧ ಹರಾಜುಗಾರ ಹ್ಯೂ ಎಡ್ಮೆಡ್ಸ್ ಕುಸಿದು ಬಿದ್ದಿದ್ದಾರೆ. ಅವರನ್ನ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಇದರಿಂದ ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಶ್ರೀಲಂಕಾದ ಆಟಗಾರ ವನಿಂಡು ಹಸರಂಗ ಅವರನ್ನು ಬಿಡ್ ಮಾಡುತ್ತಿರುವಾಗ ಎಡ್ಮೆಡ್ಸ್ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹರಾಜುದಾರ ಹ್ಯೂ ಎಡ್ಮೇಡ್ಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಡುಬಂದಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಗಮನ ಹರಿಸಲಾಗುತ್ತಿದೆ. ಕೆಲವೇ ಕ್ಷಣಗಳಲ್ಲಿ ಐಪಿಎಲ್ ಮೆಗಾ ಆಕ್ಷನ್ ಮತ್ತೆ ಶುರುವಾಗಲಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಟ್ವೀಟ್ ಮಾಡಿದೆ. ಇನ್ನು ಮಧ್ಯಾಹ್ನ 12 ಗಂಟೆಗೆ ಈ ವರ್ಷದ ಮೆಗಾ ಹರಾಜು ಪ್ರಕ್ರಿಯೆ ಶುರುವಾಯಿತು. ಈ ಹರಾಜಿನಲ್ಲಿ, ಶಿಖರ್ ಧವನ್ ಮೊದಲು ಮಾರಾಟಗೊಂಡ ಆಟಗಾರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...