alex Certify ಐಪಿಎಲ್​ ಹರಾಜು ಕಾರ್ಯಕ್ರಮದಲ್ಲಿ ಸಹೋದರಿಯ ಜೊತೆ ಭಾಗಿಯಾದ ಶಾರೂಕ್​ ಪುತ್ರ ಆರ್ಯನ್​ ಖಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ ಹರಾಜು ಕಾರ್ಯಕ್ರಮದಲ್ಲಿ ಸಹೋದರಿಯ ಜೊತೆ ಭಾಗಿಯಾದ ಶಾರೂಕ್​ ಪುತ್ರ ಆರ್ಯನ್​ ಖಾನ್​

ಬಹುನಿರೀಕ್ಷಿತ ಐಪಿಎಲ್​​ ಸೀಸನ್​ ಮತ್ತೆ ಶುರುವಾಗಿದೆ​, ಈ ಬಾರಿ ನಡೆಯುತ್ತಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಶಾರೂಕ್​ ಖಾನ್​ ಮಕ್ಕಳಾದ ಆರ್ಯನ್​​ ಖಾನ್​ ಹಾಗೂ ಸುಹಾನಾ ಖಾನ್​ ಭಾಗವಹಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಮದ್ಯ ಸೇವನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದ ಬಳಿಕ ಇದೇ ಮೊದಲ ಬಾರಿಗೆ ಆರ್ಯನ್​ ಖಾನ್​ ಸಾರ್ವಜನಿಕ ಸಭೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಶಾರೂಕ್​ ಖಾನ್​ ಈ ಕಾರ್ಯಕ್ರಮಕ್ಕೆ ಗೈರಾಗಿದ್ದು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪರವಾಗಿ ಆರ್ಯನ್​ ಖಾನ್​ ಹಾಗೂ ಸುಹಾನಾ ಖಾನ್​ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾದರು. ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಆರ್ಯನ್​ ಖಾನ್​ ಮತ್ತು ಸುಹಾನಾ ಖಾನ್ ಇರುವುದು ಗಮನಕ್ಕೆ ಬಂದ ತಕ್ಷಣ ಅವರ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನಟಿ ಜೂಹಿ ಚಾವ್ಲಾ ಕೂಡ ಇಬ್ಬರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು ಇಬ್ಬರು ಮಕ್ಕಳನ್ನು ನೋಡುವುದಕ್ಕೆ ತುಂಬಾನೇ ಸಂತಸವಾಗಿದೆ ಎಂದು ಬರೆದುಕೊಂಡಿದ್ದಾರೆ.

ಆರ್ಯನ್​ ಖಾನ್​ ಬಗ್ಗೆ ಹೇಳುವುದಾದರೆ, ಮುಂಬೈನ ಅರ್ಥೂರ್​ ರೋಡ್​ ಜೈಲಿನಲ್ಲಿ 28 ದಿನಗಳು ಬಂಧನಕ್ಕೊಳಗಾದ ಬಳಿಕ ಜಾಮೀನಿನ ಮೂಲಕ ಹೊರಬಂದಿದ್ದಾರೆ. ಬಾಂಬೆ ಹೈಕೋರ್ಟ್​ ಇತ್ತೀಚೆಗಷ್ಟೇ ಆರ್ಯನ್​ ಖಾನ್​​ಗೆ ಪ್ರತಿವಾರ ಎನ್​ಸಿಬಿ ಕಚೇರಿಗೆ ಹಾಜರಾಗುವುದರಿಂದ ಮುಕ್ತಿ ನೀಡಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...