alex Certify ಐದಂತಸ್ತಿನ ಕಟ್ಟಡದಿಂದ ಬಿದ್ದ ಪುಟ್ಟ ಕಂದನನ್ನು ಕ್ಯಾಚ್ ಹಿಡಿದು ರಕ್ಷಣೆ…! ವ್ಯಕ್ತಿಯ ಸಮಯ ಪ್ರಜ್ಞೆಯನ್ನು ಕೊಂಡಾಡಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದಂತಸ್ತಿನ ಕಟ್ಟಡದಿಂದ ಬಿದ್ದ ಪುಟ್ಟ ಕಂದನನ್ನು ಕ್ಯಾಚ್ ಹಿಡಿದು ರಕ್ಷಣೆ…! ವ್ಯಕ್ತಿಯ ಸಮಯ ಪ್ರಜ್ಞೆಯನ್ನು ಕೊಂಡಾಡಿದ ನೆಟ್ಟಿಗರು

ಐದಂತಸ್ತಿನ ಕಟ್ಟಡದಿಂದ ಬಿದ್ದ ಎರಡು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ತನ್ನ ಸಮಯಪ್ರಜ್ಞೆ ಮೆರೆಯುವ ಮೂಲಕ ಕ್ಯಾಚ್ ಹಿಡಿದು ರಕ್ಷಣೆ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೀನಾದ Zhejiang ಪ್ರಾಂತ್ಯದ Tongxiang ನಲ್ಲಿ ಈ ಘಟನೆ ನಡೆದಿದ್ದು, ಪ್ರತಿಯೊಬ್ಬ ತನ್ನ ಕಾರ್ ಪಾರ್ಕಿಂಗ್ ಮಾಡುತ್ತಿದ್ದ ವೇಳೆ ಆತನಿಗೆ ದೊಡ್ಡ ಕೂಗು ಕೇಳಿ ಬಂದಿದೆ. ಕೂಡಲೇ ಇಳಿದುಬಂದ ಆತ ಮಗುವೊಂದು ಕಟ್ಟಡದಲ್ಲಿ ನೇತಾಡುತ್ತಿರುವುದನ್ನು ಕಂಡಿದ್ದಾನೆ.

ಇನ್ನೇನು ಮಗು ನೆಲಕ್ಕೆ ಬೀಳುತ್ತದೆ ಎನ್ನುವ ಸಂದರ್ಭದಲ್ಲಿ ಶೆನ್ ಡಾಂಗ್ ಎಂಬ ಈ ವ್ಯಕ್ತಿ ಕ್ಯಾಚ್ ಹಿಡಿಯುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಈ ವಿಡಿಯೋ ಈಗಾಗಲೇ 70000ಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಈತ ರಿಯಲ್ ಹೀರೋ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...