alex Certify ಏನ್ರೀ ಏಕವಚನದಲ್ಲಿ ಮಾತನಾಡ್ತೀರಾ ? ನಾನು ನಿಮ್ಮನೇಲಿ ಜೀತಕ್ಕಿದ್ದೀನಾ ? ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನ್ರೀ ಏಕವಚನದಲ್ಲಿ ಮಾತನಾಡ್ತೀರಾ ? ನಾನು ನಿಮ್ಮನೇಲಿ ಜೀತಕ್ಕಿದ್ದೀನಾ ? ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಆಕ್ರೋಶ

ಕಾಂಗ್ರೆಸ್ ಅವರು ಆರೋಪ ಮಾಡುವುದಕ್ಕೂ ಮುನ್ನ ದಾಖಲೆ ತೋರಿಸಲಿ: ಸಚಿವ ವಿ ಸೋಮಣ್ಣ -

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದಕ್ಕೆ ಸಚಿವ ಸೋಮಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನ್ರೀ ಏಕವಚನದಲ್ಲಿ ಮಾತನಾಡುತ್ತೀರಾ ? ನಾನು ನಿಮ್ಮನೇಲಿ ಜೀತಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ನನ್ನ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದು ಲಕ್ಷ ಮನೆ ಮಂಜೂರಾತಿ ಮಾಡಿದ್ದು, ಅದನ್ನು ಸೋಮಣ್ಣ ಹಾಳು ಮಾಡಿದ್ದಾನೆ ಎಂದಿದ್ದಾರೆ. ಇದು ನನಗೆ ಬೇಸರ ತರಿಸಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರ ಬಂಗಲೆ ನನ್ನ ಕ್ಷೇತ್ರದಲ್ಲಿಯೇ ಇದೆ. ಅವರು ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂದು ನಾನು ಹೇಳಲಾ ಎಂದು ಪ್ರಶ್ನಿಸಿದ ಸೋಮಣ್ಣ, ನಾನು ಸಿದ್ದರಾಮಯ್ಯ ಒಟ್ಟಿಗೆ ರಾಜಕೀಯಕ್ಕೆ ಬಂದವರು. ವಾಸ್ತವತೆಯನ್ನು ಅರಿತು ಅವರು ಮಾತನಾಡಲಿ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...