alex Certify ಏನಿದು ರಿಸರ್ವ್ ಬ್ಯಾಂಕ್ – ಏಕೀಕೃತ ಲೋಕಪಾಲ ಯೋಜನೆ…? ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನಿದು ರಿಸರ್ವ್ ಬ್ಯಾಂಕ್ – ಏಕೀಕೃತ ಲೋಕಪಾಲ ಯೋಜನೆ…? ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಯಂತ್ರಿತ ಘಟಕಗಳ ವಿರುದ್ಧ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ್ ಯೋಜನೆಯನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗೆ ಈ ಕುರಿತ ಬಹುಮುಖ್ಯ ಮಾಹಿತಿ ಇಲ್ಲಿದೆ.

30 ದಿನಗಳೊಳಗೆ ದೂರಿಗೆ ಪರಿಹಾರ ಸಿಗದಿದ್ದರೆ ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖೇನ ನಿಯಮಿತ ಬ್ಯಾಂಕ್/NBFC/ಸಿಸ್ಟಮ್ ಪಾರ್ಟಿಸಿಪೆಂಟ್ ಮುಖೇನ ತೃಪ್ತಿದಾಯಕ ಪರಿಹಾರ ಸಿಗದಿದ್ದರೆ ಲೋಕಪಾಲ/ಒಂಬುಡ್ಸ್ಮನ್ ಅವರಿಗೆ ದೂರನ್ನು ಸಲ್ಲಿಸಬಹುದು.

ಸೇವಾ ನ್ಯೂನ್ಯತೆಗೆ ಸಂಬಂಧಿಸಿದ ದೂರುಗಳಿಗೂ ಇದು ಅನ್ವಯವಾಗುತ್ತದೆ. (ಪಟ್ಟಿಯಲ್ಲಿ ಇಲ್ಲದ ದೂರುಗಳನ್ನು ಹೊರತುಪಡಿಸಿ)

https://cms rbi.org.in ನಲ್ಲಿ ಆನ್ಲೈನ್ನಲ್ಲಿ ದೂರುಗಳನ್ನು ಸಲ್ಲಿಸಿ ಅಥವಾ ಇಮೇಲ್ ಮೂಲಕ email: crpc@rbi.org.in ಗೆ ಅಥವಾ ಪೋಸ್ಟ್ ಮೂಲಕ ಸೆಂಟ್ರಲೈಸ್ಡ್ ರಿಸೀಪ್ಟ್ ಗೆ ಸಲ್ಲಿಸಿ ಮತ್ತು ಪ್ರೊಸೆಸ್ಸಿಂಗ್ ಸೆಂಟರ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಂಡಿಗಢ -160017 ಇಲ್ಲಿಗೆ ಸಲ್ಲಿಸಬಹುದು.

ಅಲ್ಲದೆ ಕಂಪ್ಲೇಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ನಲ್ಲಿ https://cms.rbi.org.in ನಿಮ್ಮ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 14448 ಕರೆ ಮಾಡಿ ಅಥವಾ ದೂರು ಸಲ್ಲಿಸಲು https://cms.rbi.org.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...